ನವದೆಹಲಿ: ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಶೂಟಿಂಗ್‌ನಲ್ಲಿ ಅವಳಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತದ ತಾರಾ ಶೂಟರ್ ಮನು ಭಾಕರ್ ಅವರ ಸಾಧನೆಯ ಹಸಿವು ಇನ್ನೂ ತಣಿದಿಲ್ಲ. ಇಂದು ನಡೆಯುವ ಮಹಿಳೆಯರ 25 ಮೀಟರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಹ್ಯಾಟ್ರಿಕ್ ಪದಕದ ನಿರೀಕ್ಷೆಯಲ್ಲಿದ್ದಾರೆ.
25 ಮೀಟರ್ ಪಿಸ್ತೂಲ್ ಶೂಟಿಂಗ್, ಮನು ಭಾಕರ್ ಅವರ ನೆಚ್ಚಿನ ಸ್ಪರ್ಧೆಯಾಗಿದೆ. ಈ ವಿಭಾಗದಲ್ಲಿ ಈಗಾಗಲೇ ಅವರು ವಿಶ್ವ ಚಾಂಪಿಯನ್ಶಿಪ್ ಕೂಟದಲ್ಲಿ 1 ಚಿನ್ನ ಮತ್ತು ಬೆಳ್ಳಿ ಗೆದ್ದಿದ್ದಾರೆ. ಶಿಸ್ತುಬದ್ಧವಾಗಿ ಸಾಮರ್ಥ್ಯ ಪ್ರದರ್ಶಿಸುವ ಅವರು ಪದಕ ಗೆಲ್ಲುವ ನಿರೀಕ್ಷೆ ಮಾಡಲಾಗಿದೆ. ಗೆದ್ದರೆ ಭಾರತದ ಪರ ಐತಿಹಾಸಿಕ ಸಾಧನೆ ಮಾಡಲಿದ್ದಾರೆ.