ಜೋಯಿಡಾ : ಗೋವಾ -ಕರ್ನಾಟಕ ಗಡಿಯ ಅನಮೋಡ ಚೆಕ್ ಪೋಸ್ಟ ಸಮೀಪ ಡಕಾಯಿತರ ತಂಡದ ಇಬ್ಬರು ಆರೋಪಿಗಳನ್ನು ಕಾಡಿನಲ್ಲಿ ಅಟ್ಟಾಡಿಸಿ ಬಂದಿಸಿದ ಘಟನೆ ನಡೆದಿದೆ.
ಗೋವಾದಿಂದ ಹುಬ್ಬಳ್ಳಿ ಕಡೆಗೆ ಐದು ಜನರ ತಂಡ ಪ್ರಯಾಣ ಬೆಳೆಸಿದ ಮಾಹಿತಿ ತಿಳಿದ ಕೂಡಲೇ ತಕ್ಷಣ ಕಾರ್ಯಪ್ರವೃತ್ತರಾದ ರಾಮನಗರ ಪಿ.ಎಸ್.ಐ ಬಸರಾಜ ಮಬನೂರ ಅವರ ತಂಡ ಐದು ಜನ ಡಕಾಯಿತರಲ್ಲಿ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.ಬಂಧಿತರಿಂದ ಲೋಡೆಡ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.
ಡಕಾಯತರು ಚೆಕ್ ಪೋಸ್ಟ ನಲ್ಲಿ ಪೋಲೀಸರನ್ನು ನೋಡಿ ವಾಹನದಿಂದ ಇಳಿದು ಐದು ಜನ ಓಡಿ ಪರಾರಿಯಾಗಿದ್ದರು ನಂತರ ಮಾಹಿತಿ ತಿಳಿದ ಪೋಲೀಸರು ಅವರನ್ನು ಅರಣ್ಯ ಪ್ರದೇಶದಲ್ಲಿ ಅಟ್ಟಾಡಿಸಿ ಬಂಧಿಸಿದ್ದಾರೆ.
ಬಂಧಿತರು ರಾಜಸ್ಥಾನ ಮೂಲದವರು ಎಂದು ಹೇಳಲಾಗಿದ್ದು, ಗೋವರ್ದನ್ ಬಾಬು ಸಿಂಗ್ ರಾಜಪುರೋಹಿತ್ ಮತ್ತು ಶ್ಯಾಮಲಾಲ ದೀಪರಾಮಜಿ ಮೇಘವಾಳ ಬಂಧಿತ ಆರೋಪಿಗಳು.ಪರಾರಿಯಾದವರ ಶೋಧ ನಡೆಸಲಾಗಿದೆ.
ಗೋವಾದಲ್ಲಿ ಚಿನ್ನದ ಅಂಗಡಿಯೊಂದರಲ್ಲಿ ಕಳವು ಮಾಡಲು ಬಂದಿದ್ದ ಈ ತಂಡವು ಕೃತ್ಯವೆಸಗಲು ಸಾಧ್ಯವಾಗದೆ ವಾಪಸ್ ಅನಮೋಡದಿಂದ ತೆರಳುತ್ತಿದ್ದಾಗ ಪೊಲೀಸರ ಜಾಲಕ್ಕೆ ಸಿಕ್ಕಿ ಬಿದ್ದಿದ್ದಾರೆ.
ಈ ಕುರಿತು ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.