ನಗರಸಭೆ ಸದಸ್ಯರಿಂದ ಹರ್ ಘರ್ ತಿರಂಗಾ ಜಾಗೃತಿ ಅಭಿಯಾನ

ದಾಂಡೇಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹರ್ ಗರ್ ತಿರಂಗಾ ಅಭಿಯಾನವನ್ನು ಎಲ್ಲೆಡೆ ಹಮ್ಮಿಕೊಳ್ಳಲಾಗಿದೆ. ಇಂದು ನಗರದ ವಾರ್ಡ ನಂ 11 ರಲ್ಲಿ ನಗರ ಸಭೆ ಸದಸ್ಯ ಮಹಾದೇವ ಜಮಾದಾರ, ಮನೆ ಮನೆಗೆ ತೆರಳಿ ರಾಷ್ಟ್ರ ಧ್ವಜವನ್ನು ನೀಡಿ ಜಾಗೃತಿ ಮೂಡಿಸಿದರು. ಈ ವೇಳೆ ಕಾಂಗ್ರೆಸ್ ಮಹಿಳಾ ಸದಸ್ಯರಾದ ಸರಸ್ವತಿ ಸತೀಶ ಚವ್ಹಾಣ, ಸಿದ್ದರಾಮ ಗಾಣಗೇರ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.