ಮೈಸೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ರೋಚಕ ಸಂಗತಿಗಳು ಹೊರಬೀಳುತ್ತಿವೆ. ಈ ನಡುವೆ ರೇಣುಕಾಸ್ವಾಮಿ ಹತ್ಯೆ ಮಸೂರಿನ ಖಾಸಗಿ ಹೋಟೆಲ್‌ನಲ್ಲಿ ಸ್ಕೆಚ್ ನಡೆದಿತ್ತು ಎಂಬ ಸ್ಫೋಟಕ ರಹಸ್ಯ ಹೊರಬಿದ್ದಿದೆ. ಹೌದು. ರೇಣುಕಾಸ್ವಾಮಿ ಹತ್ಯೆಗೆ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸ್ಕೆಚ್ ನಡೆದಿತ್ತು. ಅದಕ್ಕಾಗಿಯೇ ಆರೋಪಿ ನಾಗ ಮತ್ತು ಲಕ್ಷ್ಮಣ್ ಇಬ್ಬರನ್ನ ಅಲ್ಲಿಗೆ ಕರೆತಂದು ಪೊಲೀಸರು ಸ್ಥಳ ಮಹಜರು ನಡೆಸಿದ್ದರು ಎಂದು ತಿಳಿದುಬಂದಿದೆ.
ಆರೋಪಿ ನಾಗ ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದ. ರಾಜ್ಯದಲ್ಲಿನ ದರ್ಶನ್ ಅಭಿಮಾನಿ ಸಂಘಗಳ ಜೊತೆಗೆ ನೇರವಾಗಿ ಸಂಪರ್ಕದಲ್ಲಿ ಇದ್ದಿದ್ದು ನಾಗ ಮಾತ್ರ. ಈ ಕಾರಣದಿಂದಲೇ ನಟ ದರ್ಶನ್ ಸಂಪರ್ಕ ಮಾಡಬೇಕಾದ್ರೆ ಅಭಿಮಾನಿಗಳು ಮೊದಲು ನಾಗನನ್ನ ಸಂಪರ್ಕ ಮಾಡುತ್ತಿದ್ದರಂತೆ. ಈ ಪ್ರಕರಣದಲ್ಲಿಯೂ ಯಾರ ಮೂಲಕ ರೇಣುಕಸ್ವಾಮಿ ಕರೆಸಬೇಕು ಎಂದು ನಾಗ ತನ್ನ ಸಂಗಡಿಗರೊಂದಿಗೆ ಪ್ಲ್ಯಾನ್ ಮಾಡಿದ್ದ. ಅದಕ್ಕಾಗಿ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸ್ಥಳ ಮಹಜರು ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರೇಣುಕಾಸ್ವಾಮಿಯನ್ನು ‘ಡಿ’ ಗ್ಯಾಂಗ್ ಪತ್ತೆ ಮಾಡಿದ್ದು ಹೇಗೆ?
ರೇಣುಕಾಸ್ವಾಮಿ ಯಾವ ಹೆಸರಿನಲ್ಲಿ ಚಾಟ್ ಮಾಡಿದ್ದ? ಆತನ ವಿಳಾಸ, ಫೋನ್ ನಂಬರ್ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಪವಿತ್ರಗೌಡ ಜೊತೆಯಲ್ಲಿ ರೇಣುಕಾಸ್ವಾಮಿ ಮಾಡಿದ್ದ ಚಾಟ್ ಲಿಸ್ಟ್ ಲಭ್ಯವಾಗಿ ಎನ್ನಲಾಗಿದೆ. ರೇಣುಕಾಸ್ವಾಮಿ ಪವಿತ್ರಾಗೌಡ ಜೊತೆಗೆ ಚಾಟ್ ಮಾಡಿದ್ದು, ಗೌತಮ್ ಹೆಸರಿನಲ್ಲಿ. ಕಾಮೆಂಟ್ ಮಾಡಲು ರೆಡ್ಡಿ ಹೆಸರಲ್ಲಿ ಅಕೌಂಟ್ ಕ್ರಿಯೇಟ್ ಆಗಿತ್ತು. ಆದರೆ ಮೆಸೇಜ್ ಮಾಡುವಾಗ ಗೌತಮ್ ಅಕೌಂಟ್ ಅಲ್ಲಿ ಮೆಸೇಜ್ ಮಾಡುತ್ತಿದ್ದ. ಹೀಗೆ ಮೆಸೇಜ್ ಮಾಡುವಾಗ ತನ್ನ ಫೋನ್ ನಂಬರ್ ಕೊಟ್ಟಿದ್ದಾನೆ. ಜೊತೆಗೆ ತನ್ನ ಫೋಟೋವನ್ನು ಕೂಡ ಕಳುಹಿಸಿದ್ದಾನೆ ಎಂಬ ವಿಷಯ ಬಯಲಾಗಿದೆ.
ಇದನ್ನೇ ಇಟ್ಟುಕೊಂಡು `ಡಿ’ ಗ್ಯಾಂಗ್ ಇನ್ನೊಂದು ನಕಲಿ ಐಡಿ ಕ್ರಿಯೇಟ್ ಮಾಡಿ ಖೆಡ್ಡಾಗೆ ಕೆಡವಿದ್ದಾರೆ. ರೇಣುಕಾಸ್ವಾಮಿ ಚಿತ್ರದುರ್ಗದವನು ಅಂತಾ ಗೊತ್ತಾದ ಮೇಲೆ ರಾಘುಗೆ ಡೀಲ್ ಒಪ್ಪಿಸಲಾಗಿದೆ. ಡೀಲ್ ಪಡೆದ ರಾಘು, ರೇಣುಕಾಸ್ವಾಮಿಯನ್ನು ಅಪಹರಣ ಮಾಡಿ ಬೆಂಗಳೂರಿಗೆ ಕರೆತಂದಿದ್ದ ಎಂದು ತಿಳಿದುಬಂದಿದೆ.