ಶಿರಸಿ: ತಾಲೂಕಿನಾದ್ಯಂತ ಬುಧವಾರ ಗಾಳಿ ಮಳೆ ತೀವ್ರಗೊಂಡಿದೆ. ಗಾಳಿಯ ಅಬ್ಬರಕ್ಕೆ ಹಲವು ಮನೆಗಳು ಕುಸಿದು ಬಿದ್ದಿವೆ.
ಹುಲೇಕಲ್ ಹೋಬಳಿ ಶೀಗೆಮನೆಯಲ್ಲಿ ಶೋಭಾ ಆಚಾರಿ, ಕಜಂಬ್ರಿಗದ್ದೆಯ ಮಂಜುನಾಥ ಪೂಜಾರಿ ಅವರ ಮನೆಗೆ ಧಕ್ಕೆ ಆಗಿದೆ. ಚಿಪಗಿಯ ಗುರುಪ್ರಸಾದ ಹೆಗಡೆ, ಪಡಂಬೈಲಿನ ನಾಗವೇಣಿ ಪೂಜಾರಿ, ಕಸ್ತೂರಬಾ ನಗರದ ಆಜಾದ್ ಬಾಬಾಜಾನ್ ಅವರ ಮನೆಗೆ ಹಾನಿಯಾಗಿದೆ. ಬನವಾಸಿ ರಂಗಾಪುರದಲ್ಲಿ ಸವಿತಾ ಹಿರೂರ ಅವರ ಮನೆ ಸಂಪೂರ್ಣ ಕುಸಿದಿದ್ದರೆ, ಜ್ಯೋತಿ ನಾಯಕ್, ಪರಮೇಶ್ವರ ಪಟಗಾರ, ಕಮಲವ್ವ, ವಸಂತಿ ಶೆಟ್ಟಿಯಾರ್, ಉಮೇಶ ಬಾಂದ್ರೆ ಅವರ ಕೊಟ್ಟಿಗೆ ಕುಸಿದಿದೆ.