India vs Pakistan: ಭಾರತ-ಪಾಕಿಸ್ತಾನ್​​ ಪಂದ್ಯಕ್ಕೆ ವರುಣನ ಭೀತಿ..?

ಐಸಿಸಿ ಪುರುಷರ ಟಿ 20 ವಿಶ್ವಕಪ್ (T20 World Cup)​​ ಈಗಾಗಲೇ ಶುರುವಾಗಿದೆ. ಆದರೆ ಕ್ರಿಕೆಟ್ ಪ್ರೇಮಿಗಳಿಗೆ ಇಂದು ಹಬ್ಬವೆಂದು ಹೇಳಬಹುದು. ಏಕೆಂದರೆ ಭಾರತ ವರ್ಸಸ್ ಪಾಕಿಸ್ತಾನ (IND vs PAK) ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಪಾಕ್ ವಿರುದ್ಧ ಗೆಲ್ಲಲು ನಾಯಕ ರೋಹಿತ್ ಶರ್ಮಾ ಪಡೆ ಸಜ್ಜಾಗಿದೆ. ಇಂದಿನ ಹೈವೋಲ್ಟೇಜ್ ಪಂದ್ಯಕ್ಕಾಗಿ ವಿಶ್ವದಾದ್ಯಂತ ಅಭಿಮಾನಿಗಳು ಕಾತುರರಾಗಿದ್ದಾರೆ. ನ್ಯೂಯಾರ್ಕ್‌ನ ನಸ್ಸೌ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಮಳೆರಾಯ ಕೃಪೆ ತೋರಬೇಕಾಗಿದೆ. ಹಾಗಾದ್ರೆ ಮಹತ್ವದ ಪಂದ್ಯಕ್ಕೆ ಹವಾಮಾನ ಹೇಗಿರಲಿದೆ ತಿಳಿಯಿರಿ.

ಹವಾಮಾನ ವರದಿ:
ಆಕ್ಯುವೆದರ್​ ಪ್ರಕಾರ ಅಮೆರಿಕ ಕಾಲಮಾನದಂತೆ ಪಂದ್ಯದ ಪ್ರಾರಂಭದ ಸಮಯದಲ್ಲಿ ಗುಡುಗು ಸಿಡಿಲಿನೊಂದಿಗೆ ಮಳೆ ಆಗುವ ಸಾಧ್ಯತೆ ಇದೆ. ಭಾನುವಾರ ಬೆಳಿಗ್ಗೆ 10 ಗಂಟೆಗೆ ನ್ಯೂಯಾರ್ಕ್‌ನಲ್ಲಿ ಶೇ 40 ರಷ್ಟು ಮಳೆ ಸಾಧ್ಯತೆ ಇದೆ. ಆದಾಗ್ಯೂ, ಮುಂದಿನ ಮೂರು ಗಂಟೆಗಳಲ್ಲಿ ಮಳೆ ಪ್ರಮಾಣ ಕಡೆಮೆ ಆಗಲಿದೆ. ಹೀಗಾಗಿ ಒಟ್ಟಿನಲ್ಲಿ ಸುಮಾರು 1 ಗಂಟೆ ಮಳೆ ಆಗುವ ನಿರೀಕ್ಷೆಯಿದೆ.

ವೆದರ್. ಕಾಮ್​ ಪ್ರಕಾರ ಸುಮಾರು 10 ಗಂಟೆಗೆ ತುಂತುರು ಮಳೆ ಆಗಲಿದ್ದು, ನಂತರ ಹೆಚ್ಚಾಗಬಹುದು. ಇನ್ನು ಪಂದ್ಯವು ರದ್ದಾಗುವ ಸಾಧ್ಯತೆಯಿಲ್ಲ ಮತ್ತು ಪೂರ್ಣ 40 ಓವರ್ಗಳ ಪಂದ್ಯ ನಡೆಯದಿದ್ದರೂ ಸಹ ಫಲಿತಾಂಶವು ಕಾರ್ಡ್ನಲ್ಲಿದೆ. ನಸ್ಸೌ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯಾವಳಿಯಲ್ಲಿ ಪಿಚ್ ಈಗಾಗಲೇ ಸಮಸ್ಯೆಯಾಗಿದೆ.

ಈ ಟಿ20 ವಿಶ್ವಕಕ್​ನಲ್ಲಿ ಭಾರತದ ಮೊದಲ ಪಂದ್ಯ ಜೂನ್ 5 ರಂದು ನಡೆದಿತ್ತು. ಐರ್ಲೆಂಡ್ ವಿರುದ್ಧ ಆಡುವ ಮೂಲಕ ಈ ಬಾರಿಯ ಟಿ20 ವಿಶ್ವಕಪ್​ಗೆ ಭಾರತ ಪಾದಾರ್ಪಣೆ ಮಾಡಿತ್ತು. ಭಾರತದ ವಿರುದ್ಧ ವಿಶ್ವಕಪ್​​ನಲ್ಲಿ ಸಾಲು ಸಾಲು ಸೋಲುಗಳನ್ನ ಅನುಭವಿಸಿರುವ ಪಾಕಿಸ್ತಾನ, ಈ ಬಾರಿ ಟೀಮ್ ಇಂಡಿಯಾ ವಿರುದ್ಧ ಹಿಂದಿನ ಸೋಲುಗಳ ಸೇಡು ತೀರಿಸಿಕೊಳ್ಳೋಕೆ ಶತಯತ್ನ ನಡೆಸುವುದಕ್ಕೆ ಸಜ್ಜಾಗಿದೆ.

ಆದರೆ ಬಲಿಷ್ಠ ಭಾರತ ತಂಡವನ್ನು ಅದ್ರಲ್ಲೂ ಪಾಕಿಸ್ತಾನದ ವಿರುದ್ಧ ಅತಿಹೆಚ್ಚು ಸ್ಟ್ರೈಕ್ ರೇಟ್ ಹೊಂದಿರೋ ಕಿಂಗ್ ಕೊಹ್ಲಿ ಸೆಣಸಾಡಿ ಜಯಗಳಿಸೋದು ಪಾಕ್ ಪಡೆ ಪಾಲಿಗೆ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ.