ಅಖಿಲ ಭಾರತ ಅಂಚೆ ನೌಕರ ಸಂಘದಿಂದ ಭಟ್ಕಳ ಅಂಚೆ ಕಚೇರಿ ಮುಂಭಾಗದಲ್ಲಿ ಮುಷ್ಕರ

ಭಟ್ಕಳ: ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಯನ್ನು ವಿರೋಧಿಸಿ ಅಖಿಲ ಭಾರತ ಅಂಚೆ ನೌಕರ ಸಂಘದಿಂದ ಭಟ್ಕಳ ಅಂಚೆ ಕಚೇರಿ ಮುಂಭಾಗದಲ್ಲಿ ಒಂದು ದಿನದ ಮುಷ್ಕರವನ್ನು ಹಮ್ಮಿಕೊಂಡಿದ್ದಾರೆ.

ದೇಶಾದ್ಯಂತ ಅಂಚೆ ನೌಕರರರು ವಿವಿಧ ಬೇಡಿಕೆಯನ್ನು ಮುಂದಿಟ್ಟು ಇಂದು ಮುಷ್ಕರ ನಡೆಸಲಾಗುತ್ತಿದೆ. ಅಖಿಲ ಭಾರತ ಅಂಚೆ ನೌಕರ ಸಂಘ ಗ್ರೂಪ್ ಸಿ ಹಾಗೂ ಪೋಸ್ಟ್ ಮೆನ್, ಎಂ.ಟಿ.ಎಸ್ ಕಾರವಾರ ವಿಭಾಗದಿಂದ ಮುಷ್ಕರ ನಡೆಸಿಲಾಗಿದೆ.

ಅಖಿಲ ಭಾರತ ಅಂಚೆ ನೌಕರ ಸಂಘ ಅಧ್ಯಕ್ಷ ಹಾಗೂ ಭಟ್ಕಳ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಎಂ.ಎಸ್ ಗೊಂಡ ಮಾತನಾಡಿ ಇಂದು ದೇಶಾದ್ಯಂತ ಅಂಚೆ ನೌಕರರು ಸರ್ಕಾರದ ವಿರುದ್ಧ ಒಂದು ದಿನದ ಮುಷ್ಕರ ಹಮ್ಮಿಕೊಂಡಿದ್ದು ಅದರಂತೆ ಭಟ್ಕಳದಲ್ಲೂ ಕೂಡ ನಾವು ಮುಷ್ಕರ ನಡೆಸುತ್ತಿದ್ದೇವೆ. ನಮ್ಮ ಮುಖ್ಯ ಬೇಡಿಕೆ ಕೇಂದ್ರ ಸರ್ಕಾರದ ಖಾಸಗೀಕರಣ ವಿರೋಧ ನೀತಿ ಹಾಗೂ ನ್ಯೂ ಪೆಂಗ್ಷನ್ ಸ್ಕಿಮ್ (ಎನ್.ಪಿ.ಎಸ್) ಅನ್ನು ಓಲ್ಡ್ ಪೆಂಗ್ಷನ್ ಸ್ಕಿಮ್ ಆಗಿ ಪರಿವರ್ತನೆ ಮಾಡಿಲ್ಲ. ಇದರ ವಿರುದ್ಧ ನಮ್ಮ ಹೋರಾಟ ನಡೆಯುತ್ತಿದೆ. ನಮ್ಮೆಲ್ಲರ ಈ ಬೇಡಿಕೆಯನ್ನು ಕೂಡಲೇ ಸರ್ಕಾರ ಈಡೇರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸತೀಶ ಆಚಾರಿ, ಕೃಷ್ಣ ನಾಯ್ಕ, ಹರೀಶ ನಾಯ್ಕ, ನಾಗಾರಾಜ ನಾಯ್ಕ, ಶುಕ್ರ ಗೊಂಡ, ಪ್ರವೀಣ ಶಾನಭಾಗ ಹಾಗೂ ಮುಂತಾದವರಿದ್ದರು