ಅವ್ಯವಸ್ಥೆಯ ಆಗರವಾದ ಅಂಕೋಲಾ ಮುಖ್ಯ ಬಸ್‌ ನಿಲ್ದಾಣ-ಮೂಗು ಮುಚ್ಚಿದ ಸಾರ್ವಜನಿಕರು… ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಅಂಕೋಲಾ ಮೇ 31 : ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ತ್ಯಾಜ್ಯ ನೀರು ವಿಲೇವಾರಿಗೆ ಸರಿಯಾದ ವ್ಯವಸ್ಥೆ ಇಲ್ಲದ್ದರಿಂದ ಕೆಲ ದಿನಗಳಿಂದ ತಾಜ್ಯ ನೀರು ಸೋರಿಕೆಯಾಗಿ ಸಾರ್ವಜನಿಕಗೆ ತೀವ್ರ ತೊಂದರೆ ಉಂಟಾಗುತ್ತಿದ್ದು ಮೂಗು ಮುಚ್ಚಿಕೊಂಡಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಹುಕೋಟಿ ವೆಚ್ಚದ ಬಸ್ ನಿಲ್ದಾಣ ಕಾಮಗಾರಿ ವೇಳೆ ಸಮರ್ಪಕವಾಗಿ ತ್ಯಾಜ್ಯ ನೀರು ವಿಲೇವಾರಿ ಆಗುವಂತೆ ಕಾಮಗಾರಿ ನಡೆಸದೆ ಇರುವುದು ಸಮಸ್ಯೆಗೆ ಕಾರಣವಾಗಿದೆ. ವಸತಿಗೃಹ ಮತ್ತಿತರ ಕೊಠಡಿಗಳು ಮತ್ತು ಮಳಿಗೆಗಳ ನೀರು ಹರಿದು ಚರಂಡಿಗೆ ಸೇರುವಂತೆ ಸಣ್ಣ ಸಣ್ಣ ಚೇಂಬರ್ ನಿರ್ಮಿಸಿ ಪೈಪ್ ಜೋಡಣೆ ಮಾಡಲಾಗಿದೆ. ನಿಲ್ದಾಣದಲ್ಲಿನ ಹೋಟೆಲ್ ತ್ಯಾಜ್ಯ ನೀರು ವಿಲೇವಾರಿಗೆ ಪ್ರತ್ಯೇಕವಾದ ಚೇಂಬರ್ ನಿರ್ಮಿಸಿಲ್ಲ. ಇರುವ ಪೈಪ್ ಲೈನ್ ಮೂಲಕ ಹೋಟೆಲ್ ತ್ಯಾಜ್ಯ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ನೀರಿನೊಂದಿಗೆ ತ್ಯಾಜ್ಯ ವಸ್ತುಗಳು ಸೇರಿಕೊಂಡು ಸರಾಗವಾಗಿ ಹರಿಯದೆ ಜೇಂಬರ್ ತುಂಬಿ ತುಳುಕುತ್ತಿದೆ. ವಿಷಯುಕ್ತವಾಗಿರುವ ಈ ನೀರನ್ನು ಸೇವಿಸಿ ಕೆಲ ಪಕ್ಷಿಗಳು ಸಹ ಸಾವನ್ನಪ್ಪಿದೆ.

ಮೇಲ್ಭಾಗಕ್ಕೆ ನೀರು ಹರಿಯುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಇತರೆ ಪ್ರಯಾಣಿಕರು ಮಗು ಮುಚ್ಚಿಕೊಂಡೆ ಪ್ರಯಾಣ ಮಾಡುವಂತಾಗಿದೆ. ಸ್ಥಳೀಯ ಗ್ರಾಮಗಳಿಗೆ ತೆರಳುವ ಕೆಲ ಬಸ್ ಗಳನ್ನು ತುಂಬಿ ತುಳುಕುತ್ತಿರುವ ಚೇಂಬರ್ ಪಕ್ಕದಲ್ಲಿಯೇ ನಿಲುಗಡೆ ಮಾಡಲಾಗುತ್ತಿದೆ. ದುರ್ವಾಸನೆ ಒಂದೆಡೆಯಾದರೆ ವಿಷಯುಕ್ತ ನೀರು ಮತ್ತು ಸೊಳ್ಳೆಗಳ ಉತ್ಪತ್ತಿಯಿಂದ ಕಾಯಿಲೆಗಳು ಬರುವ ಆತಂಕ ಸಾರ್ವಜನಿಕರಲ್ಲಿದೆ.

ಈ ಬಗ್ಗೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಸೂಕ್ತವಾಗಿ ಸ್ಪಂದಿಸಿಲ್ಲ.ಈ ಬಗ್ಗೆ ಹಿರಿಯ ವಕೀಲ ಉಮೇಶ ನಾಯ್ಕ, ಅಸಮಾಧಾನ ವ್ಯಕ್ತಪಡಿಸಿದ್ದು, ಸಮಸ್ಯೆ ಮುಂದುವರೆದರೆ ಕಾನೂನು ಸೇವಾ ಸಮಿತಿಗೆ ದೂರು ನೀಡುವುದಾಗಿ ಮಾಧ್ಯಮದ ಮೂಲಕ ಎಚ್ಚರಿಕೆ ನೀಡಿದ್ದಾರೆ..