ಕುಟುಂಬ ಸದಸ್ಯರು ಇರುವಾಗಲೇ ಕುಸಿದು ಬಿದ್ದ ಮನೆಯ ಗೋಡೆ

ಮುಂಡಗೋಡ: ತಾಲೂಕಿನ ಗುಂಜಾವತಿ ಗ್ರಾ. ಪಂ ವ್ಯಾಪ್ತಿಯ ಉಗ್ಗಿನಕೇರಿ ಗ್ರಾಮದಲ್ಲಿ ಸತತ ಸುರಿಯುತ್ತಿರುವ ಮಳೆಗೆ ಮನೆ ಗೋಡೆ ಬಿದ್ದ ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಉಗ್ಗಿನಕೇರಿ ಗ್ರಾಮದ ಸಾವುಬಾಯಿ ಘಾಟು ಸಿಂದೆಗೆ ಸೇರಿದ ಮನೆ ಅಬ್ಬರದ ಮಳೆಗೆ ಗೋಡೆ ಬಿದ್ದು ಹಾನಿಯಾಗಿದೆ. ಮನೆಯ ಗೋಡೆಗಳು ಒದ್ದೆಯಾಗಿ ಕುಟುಂಬ ಸದಸ್ಯರು ಇರುವಾಗಲೇ ಕುಸಿದು ಬಿದ್ದಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಾಥಮಿಕ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.