IPL 2024 Awards: ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಪಟ್ಟಿ

ಚೆನ್ನೈ : ಇಂಡಿಯನ್‌ ಪ್ರೀಮಿಯರ್‌ ಲಿಗ್‌- 2024 ಸೀಸನ್ 17 ರ ಫೈನಲ್ ಪಂದ್ಯದಲ್ಲಿ ಗೆದ್ದು ಬೀಗುವ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸನ್​ರೈಸರ್ಸ್ ಹೈದರಾಬಾದ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಕೆಕೆಆರ್ ತಂಡದ ಕರಾರುವಾಕ್ ದಾಳಿ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದ ಸನ್​ರೈಸರ್ಸ್ ಹೈದರಾಬಾದ್ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸಿದ್ದರು. ಪರಿಣಾಮ ಕೇವಲ 18.3 ಓವರ್​ಗಳಲ್ಲಿ 113 ರನ್​ಗಳಿಸಿ ಎಸ್​ಆರ್​ಹೆಚ್​ ಸರ್ವಪತನ ಕಂಡಿತು.

114 ರನ್​ಗಳ ಸುಲಭ ಗುರಿ ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಝ್ (39) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಸ್ಪೋಟಕ ಇನಿಂಗ್ಸ್ ಆಡಿದರು. ಕೇವಲ 26 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 52 ರನ್ ಬಾರಿಸುವ ಮೂಲಕ 10.3 ಓವರ್​ಗಳಲ್ಲಿ ಕೆಕೆಆರ್ ತಂಡವನ್ನು ಗುರಿ ಮುಟ್ಟಿಸಿದರು.

ಈ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಕೆಕೆಆರ್ ಪಡೆ 3ನೇ ಬಾರಿ ಟ್ರೋಫಿ ಎತ್ತಿ ಹಿಡಿದಿರುವುದು ವಿಶೇಷ. ಇನ್ನು ಈ ಪಂದ್ಯದ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಹಲವು ಆಟಗಾರರು ಪ್ರಶಸ್ತಿ ಪಡೆದರು. ಆ ಪ್ರಶಸ್ತಿಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ಪ್ರಶಸ್ತಿಗಳ ಪಟ್ಟಿಪ್ರಶಸ್ತಿ ವಿಜೇತರುಬಹುಮಾನ ಮೊತ್ತ
ಸ್ಟ್ರೈಕರ್ ಆಫ್ ದಿ ಫೈನಲ್ ಮ್ಯಾಚ್ವೆಂಕಟೇಶ್ ಅಯ್ಯರ್1 ಲಕ್ಷ ರೂ.
ಸೂಪರ್ ಸಿಕ್ಸ್ (ಫೈನಲ್ ಮ್ಯಾಚ್)ವೆಂಕಟೇಶ್ ಅಯ್ಯರ್1 ಲಕ್ಷ ರೂ.
ಅತೀ ಹೆಚ್ಚು ಫೋರ್ (ಫೈನಲ್ ಮ್ಯಾಚ್)ರಹಮಾನುಲ್ಲಾ ಗುರ್ಬಾಝ್1 ಲಕ್ಷ ರೂ.
ಗ್ರೀನ್ ಡಾಟ್ ಬಾಲ್ (ಫೈನಲ್ ಮ್ಯಾಚ್)ಹರ್ಷಿತ್ ರಾಣಾ1 ಲಕ್ಷ ರೂ.
ಪಂದ್ಯ ಶ್ರೇಷ್ಠ (ಫೈನಲ್ ಮ್ಯಾಚ್)ಮಿಚೆಲ್ ಸ್ಟಾರ್ಕ್5 ಲಕ್ಷ ರೂ.
ಉದಯೋನ್ಮುಖ ಆಟಗಾರನಿತೀಶ್ ರೆಡ್ಡಿ10 ಲಕ್ಷ ರೂ.
ಸ್ಟ್ರೈಕರ್ ಆಫ್ ದಿ ಸೀಸನ್ಜೇಕ್ ಫ್ರೇಸರ್-ಮೆಕ್‌ಗುರ್ಕ್10 ಲಕ್ಷ ರೂ.
ಫ್ಯಾಂಟಸಿ ಪ್ಲೇಯರ್ಸುನಿಲ್ ನರೈನ್10 ಲಕ್ಷ ರೂ.
ಅತೀ ಹೆಚ್ಚು ಫೋರ್​ಗಳುಟ್ರಾವಿಸ್ ಹೆಡ್10 ಲಕ್ಷ ರೂ.
ಅತ್ಯುತ್ತಮ ಕ್ಯಾಚ್ರಮಣ್​ದೀಪ್ ಸಿಂಗ್10 ಲಕ್ಷ ರೂ.
ಫೇರ್ ಪ್ಲೇ ಅವಾರ್ಡ್​ಎಸ್​ಆರ್​ಹೆಚ್​10 ಲಕ್ಷ ರೂ.
ಪರ್ಪಲ್ ಕ್ಯಾಪ್ಹರ್ಷಲ್ ಪಟೇಲ್10 ಲಕ್ಷ ರೂ.
ಆರೆಂಜ್ ಕ್ಯಾಪ್ವಿರಾಟ್ ಕೊಹ್ಲಿ10 ಲಕ್ಷ ರೂ.
 ಅತ್ಯಂತ ಮೌಲ್ಯಯುತ ಆಟಗಾರಸುನಿಲ್ ನರೈನ್10 ಲಕ್ಷ ರೂ.
ಪಿಚ್ & ಗ್ರೌಂಡ್ ಪ್ರಶಸ್ತಿಹೈದರಾಬಾದ್ ಸ್ಟೇಡಿಯಂ50 ಲಕ್ಷ ರೂ.
ರನ್ನರ್ಸ್ ಅಪ್ಸನ್ ರೈಸರ್ಸ್ ಹೈದರಾಬಾದ್12.5 ಕೋಟಿ ರೂ.
ಚಾಂಪಿಯನ್ಸ್​ಕೊಲ್ಕತ್ತಾ ನೈಟ್ ರೈಡರ್ಸ್20 ಕೋಟಿ ರೂ.