ಭಟ್ಕಳ : ಆಟವಾಡಲು ಹೋದ ಇಬ್ಬರು ಸಮುದ್ರ ಪಾಲು

ಭಟ್ಕಳ, ಏಪ್ರಿಲ್‌ 22: ತಾಲೂಕಿನ ಹಡೀನ್‌ ಸಮುದ್ರ ಕಿನಾರೆಯಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಸಮುದ್ರ ಪಾಲಾದ ಘಟನೆ ರವಿವಾರ ಸಂಜೆ ನಡೆದಿದೆ. ಓರ್ವನ ಮೃತದೇಹ ಪತ್ತೆಯಾಗಿದ್ದು, ಇನ್ನೋರ್ವನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಹೆಬಳೆಯ ನ್ಯಾಮತ್ತುಲ್ಲ ಆಸ್ಕೇರಿ ಪುತ್ರ ಇನಾಮ್‌ ಆಸ್ಕೇರಿ (14)ಮೃತಪಟ್ಟಿದ್ದು, ಆಜಾದ ನಗರದ ನಿವಾಸಿ ಮೊಹಮ್ಮದ್ ಖಾಸಿಫ್ (22) ನಾಪತ್ತೆಯಾದವರು.

ಎರಡೂ ಕುಟುಂಬದ 10 ಜನರು ಸೋಡಿಗದ್ದೆ ಸಮುದ್ರ ತೀರಕ್ಕೆ ತೆರಳಿದ್ರು. ಈ ವೇಳೆ ಸಮುದ್ರದಲ್ಲಿ ಆಟವಾಡಲು ಹೋದ ಈ ಇಬ್ಬರು ನೀರು ಪಾಲಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ಮತ್ತು ಸಾರ್ವಜನಿಕರು ಇನ್ನೋರ್ವನಿಗಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.