ರೋಹಿತ್ ಶರ್ಮ(Rohit Sharma) ಅವರು ಸ್ಲಿಪ್ನಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬ ಏಕಾಏಕಿ ಮೈದಾನಕ್ಕೆ ನುಗ್ಗಿ ರೋಹಿತ್ ಅವರನ್ನು ತಬ್ಬಿಕೊಳ್ಳಲು ಯತ್ನಿಸಿದ್ದಾನೆ. ಹಿಂದಿನಿಂದ ಓಡಿ ಬಂದ ಈತನನ್ನು ಕಂಡು ರೋಹಿತ್ ಒಂದು ಕ್ಷಣ ಭಯಭೀತರಾಗಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(viral video) ಆಗಿದೆ.
ಮುಂಬೈ, ಏಪ್ರಿಲ್ 2 : ಪ್ರಸಕ ಸಾಗುತ್ತಿರುವ ಐಪಿಎಲ್(IPL 2024) ಟೂರ್ನಿಯಲ್ಲಿ ಪಂದ್ಯದ ವೇಳೆ ಭಾರೀ ಭದ್ರತಾ ವೈಫಲ್ಯ ಕಂಡು ಬರುತ್ತಿದೆ. ಪ್ರೇಕ್ಷಕರ ಗ್ಯಾಲರಿಂದ ಮೈದಾನಕ್ಕೆ ಓಡಿ ಬಂದು ಆಡಗಾರರನ್ನು ತಪ್ಪಿಕೊಳ್ಳುತ್ತಿರುವ ಘಟನೆಗಳು ಪದೇಪದೆ ಮರುಕಳಿಸುತ್ತಿವೆ. ಕೆಲವು ದಿನಗಳ ಹಿಂದೆ ಆರ್ಸಿಬಿ ಪಂದ್ಯದ ವೇಳೆ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿಯ(virat kohli) ಕಾಲಿಗೆ ಬಿದ್ದು ಅವರನ್ನು ತಪ್ಪಿಕೊಂಡ ಘಟನೆ ನಡೆದಿತ್ತು. ಇದೀಗ ಸೋಮವಾರದ ಮುಂಬೈ ಮತ್ತು ರಾಜಸ್ಥಾನ್ ನಡುವಿನ ಪಂದ್ಯದಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ.
ಮುಂಬಯಿ ತಂಡ ಫೀಲ್ಡಿಂಗ್ ನಡೆಸಲು ಸಿದ್ಧತೆ ನಡೆಸುತ್ತಿದ್ದ ನಡೆಸುತ್ತಿತ್ತು. ರೋಹಿತ್ ಶರ್ಮ(Rohit Sharma) ಅವರು ಸ್ಲಿಪ್ನಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬ ಏಕಾಏಕಿ ಮೈದಾನಕ್ಕೆ ನುಗ್ಗಿ ರೋಹಿತ್ ಅವರನ್ನು ತಬ್ಬಿಕೊಳ್ಳಲು ಯತ್ನಿಸಿದ್ದಾನೆ. ಹಿಂದಿನಿಂದ ಓಡಿ ಬಂದ ಈತನನ್ನು ಕಂಡು ರೋಹಿತ್ ಒಂದು ಕ್ಷಣ ಭಯಭೀತರಾಗಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(viral video) ಆಗಿದೆ.
ಅಭಿಮಾನಿ ರೋಹಿತ್ ಅವರನ್ನು ತಬ್ಬಿಕೊಂಡ ಬಳಿಕ ಪಕ್ಕದಲ್ಲೇ ನಿಂತಿದ್ದ ಇಶಾನ್ ಕಿಶನ್ ಅವರಿಗೂ ಕೈ ಕುಲುಕಿ ತಬ್ಬಿಕೊಂಡು ಮತ್ತೆ ಗ್ಯಾಲರಿಯತ್ತ ಓಡಿದ್ದಾನೆ. ಈ ಘಟನೆಯನ್ನು ಕಂಡ ಅನೇಕ ನೆಟ್ಟಿಗರು ಸ್ಟೇಡಿಯಂ ಭದ್ರತಾ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಟಗಾರರ ಜೀವಕ್ಕೆ ಕುತ್ತು ತರುವ ಘಟನೆ ಪದೇಪದೆ ನಡೆಯುತ್ತಿದ್ದರೂ ಸಿಬ್ಬಂದಿಗಳಿಗೆ ಯಾವುದೇ ಚಿಂತೆಯಿಲ್ಲ. ಇನ್ನಾದರೂ ಮುಂದಿನ ಪಂದ್ಯಗಳಲ್ಲಿ ಈ ರೀತಿಯ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ.