Viral Video :ರೋಹಿತ್​ ಪತ್ನಿಯನ್ನು ಹಿಂದಿನಿಂದ ಬಂದು ತಬ್ಬಿಕೊಂಡ ಹಾರ್ದಿಕ್​ ಪಾಂಡ್ಯ

Viral Video: ಹೋಳಿ ಆಚರಣೆಯ ವೇಳೆ ಹಾರ್ದಿಕ್​ ಪಾಂಡ್ಯ ರೋಹಿತ್​ ಶರ್ಮ ಪತ್ನಿಯನ್ನು ತಬ್ಬಿಕೊಂಡ ವಿಡಿಯೊ ವೈರಲ್​ ಆಗಿದೆ.

ಮುಂಬೈ, ಮಾರ್ಚ್‌ – 26 : ಮುಂಬೈ ಇಂಡಿಯನ್ಸ್ ತಂಡದ ಆಟಗಾರರೆಲ್ಲ ಸೋಮವಾರ ಹೋಳಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿದ್ದರು. ಪ್ರತಿಯೊಬ್ಬರೂ ಮನಸಾರೆ ಸ್ವಇಚ್ಛೆಯಿಂದ ಪರಸ್ಪರ ಬಣ್ಣ ಎರಚಿ ಬಣ್ಣದೋಕುಳಿಯಲ್ಲಿ ಮಿಂದೆದ್ದಿದ್ದರು. ಇದೇ ವೇಳೆ ತಂಡದ ನೂತನ ನಾಯಕನಾಗಿರುವ ಹಾರ್ದಿಕ್​ ಪಾಂಡ್ಯ(Hardik Pandya) ಅವರು ರೋಹಿತ್​ ಶರ್ಮ ಅವರ ಪತ್ನಿಯನ್ನು ತಬ್ಬಿಕೊಂಡು ಹೋಳಿಯ ಶಭಾಶಯ ತಿಳಿಸಿದ್ದಾರೆ. ಈ ವಿಡಿಯೊ ವೈರಲ್ (Viral Video)​ ಆಗಿದೆ.

ಎಲ್ಲ ಆಟಗಾರರು ಮತ್ತು ಅವರ ಕುಟುಂಬ ಸದಸ್ಯರು ಹೋಳಿ ಆಡಿ ಸಂಭ್ರಮಿಸುತ್ತಿದ್ದರು. ರೋಹಿತ್​ ಪತ್ನಿ ರಿತಿಕಾ ಅವರು ತಮ್ಮ ಮಗಳು ಸಮೈರಾ ಜತೆ ಬಣ್ಣ ಹಚ್ಚುತ್ತಾ ಹೋಳಿ ಆಡುತ್ತಿದ್ದ ವೇಳೆ ಹಾರ್ದಿಕ್​ ಪಾಂಡ್ಯ ಅವರು ಧಾವಿಸಿ ರಿತಿಕಾ ಅವರನ್ನು ತಬ್ಬಿಕೊಂಡರು ಶುಭ ಹಾರೈಸಿದರು. ರಿತಿಕಾ ಕೂಡ ಪ್ರತಿಯಾಗಿ ಹಾರ್ದಿಕ್​ ಅವರನ್ನು ತಬ್ಬಿಕೊಂಡು ಹಾರೈಸಿದರು. ಈ ವಿಡಿಯೊವನ್ನು ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು. ಇತ್ತೀಗೆಚೆ ಬಾರಿ ಟ್ರೆಂಟ್​ ಸೆಟ್​ ಮಾಡಿದ ‘ಹೇಯ್ ಪ್ರಭು ಯೇ ಕ್ಯಾ ಹುವಾ’ ಎಂಬ ಡೈಲಾಗನ್ನು ಕಮೆಂಟ್​ ಮಾಡಿದ್ದಾರೆ. ಗುಜರಾತ್​ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದ ವೇಳೆ ಪಾಂಡ್ಯ, ರೋಹಿತ್​ ಅವರನ್ನು ಕೂಡ ಅಪ್ಪಿಕೊಂಡಿದ್ದರು.

ಮಾಜಿ ನಾಯಕ ರೋಹಿತ್​ ಶರ್ಮ ಕೂಡ ಸಹ ಆಟಗಾರರೊಂದಿಗೆ ಮಕ್ಕಳಂತೆ ಹೋಳಿ ಆಡಿ ಕುಣಿದು ಕುಪ್ಪಳಿಸಿದ್ದರು. ಪಾಂಡ್ಯ ನಾಯಕನಾದ ವೇಳೆ ರೋಹಿತ್​ ಪತ್ನಿ ರಿತಿಕಾ ಅಸಾಮಾಧನ ಹೊರಕಾಕಿದ್ದರು. ಈ ನಿರ್ಧಾರ ಸರಿಯಲ್ಲ ಎಂದು ಹೇಳಿದ್ದರು.