ಹೊನ್ನಾವರ, ಮಾರ್ಚ್ 18 : ತಾಲೂಕಿನ ಚಂದಾವರದಲ್ಲಿ 3 ದಿನಗಳ ಕಾಲ ಹಮ್ಮಿಕೊಂಡಿದ್ದ ಚಂದಾವರ ಸೀಮೆ ಹನುಮಂತ ದೇವರ ಮೂಲ ಲೋಹಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ಲಕ್ಷಾಂತರ ಭಕ್ತರ ಮಧ್ಯೆ ಅತ್ಯಂತ ವಿಜೃಂಭಣೆಯೊಂದ ಜರುಗಿತು…
ಸುಮಾರು 2000 ವರ್ಷಗಳ ಮೂಲ ಲೋಹಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವನ್ನು ಮಾರ್ಚ 16, 17, 18 ರಂದು ಹಮ್ಮಿಕೊಳ್ಳಲಾಗಿತ್ತು. ಶ್ರೀ ದೇವರ ಪ್ರತಿಷ್ಠಾಪನಾ ಕಾರ್ಯವನ್ನು ಶ್ರೀಕ್ಷೇತ್ರ ಗೋಕರ್ಣದ ಆಗಮ ವಿದ್ವಾನ್ ತಾಂತ್ರಿಕ ವೇದಮೂರ್ತಿ ಶ್ರೀ ಕೃಷ್ಣ ಭಟ್ ಷಡಕ್ಷರಿಯವರ ನೇತೃತ್ವದಲ್ಲಿ ವಿಧಿ-ವಿಧಾನಗಳ ಮೂಲಕ ಯಶಸ್ವಿಯಾಗಿ ನೆರವೇರಿಸಲಾಯ್ತು…
ಪ್ರತಿಷ್ಠಾಪನಾ ಮಹೋತ್ಸವದ ಮೊದಲ ದಿನ ಬೆಳಿಗ್ಗೆ ಸಾರ್ವಜನಿಕ ಪ್ರಾರ್ಥನೆ, ಗಣೇಶ ಪೂಜಾ ಯತ್ವಿಗ್ವರಣ, ಕೌತುಕಬಂಧನ, ಮೂರ್ತಿಪರಿಗ್ರಹ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಎರಡನೇ ದಿನ ಬೆಳೆಗ್ಗೆ ಪ್ರತಿಷ್ಠಾ ಹೋಮಗಳು, ವೃಷಭ ಲಗ್ನದ ಶುಭ ಮೂಹೂರ್ತದಲ್ಲಿ ಮೂಲ ಮೂರ್ತಿಯ ಪ್ರಾಣ ಪ್ರತಿಷ್ಠೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕೊನೆಯ ದಿನವಾದ ಸೋಮವಾರ ಕುಂಭಾಭಿಷೇಕ, ಪೂರ್ಣಾಹುತಿ, ಮಹಾ ಮಂಗಳಾರತಿ, ಹಾಗೂ ಮೂಲ ದೇವರ ಮೆರವಣಿಗೆ, ಓಕಳಿ ಕಾರ್ಯಕ್ರಮ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಭಕ್ತರಿಂದ ವಿವಿಧ ಪೂಜಾ ಕಾರ್ಯಕ್ರಮಗಳ ಯಶಸ್ವಿಯಾಗಿ ಜರುಗಿತು. ಇನ್ನೂ ಇದೇ ವೇಳೆ ದೇವರ ಮೂಲ ಪ್ರತಿಷ್ಠಾಪನಾ ವೇಳೆ ವಿಶೇಷ ಪೂಜಾ ಕಾರ್ಯಕ್ರಮ, ಶ್ರೀ ದೇವರ ಅಲಂಕಾರ ಕಾರ್ಯಕ್ರಮ ಜರುಗಿತು.
ಇನ್ನೂ ಇದೇ ವೇಳೆ ನುಡಿಸಿರ ವಾಹಿನಿಯೊಂದಿಗೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎ.ಆರ್ ನಾಯ್ಕ ಮಾತನಾಡಿ, ಚಂದಾವರ ಸೀಮೆಯ ಹನುಮಂತ ದೇವರ ಮೂಲ ಮೂರ್ತಿ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮವನ್ನು ಮೂರು ದಿನಗಳ ಕಾಲ ನಡೆದಿದ್ದು, ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಹಾಗೂ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಸಂಪನ್ನಗೊಂಡಿದೆ ಎಂದು ಹೇಳಿದ್ರು..
ಒಟ್ನಲ್ಲಿ ಚಂದಾವರ ಸೀಮೆಯ 108 ಬೈಠಕ್‌ಗಳಲ್ಲಿ ಸಂಚರಿಸುವ ಹನುಮಂತನ ಕ್ಷೇತ್ರದ ಮೂಲ ಮೂರ್ತಿಯ ಪ್ರತಿಷ್ಠಾ ಮಹೊತ್ಸವವು 3ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಾಪ್ರಸಾದ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ವೇಳೆ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಂಜನಿಪುತ್ರನ ಕೃಪೆಗೆ ಪಾತ್ರರಾದ್ರು..