ಕೆಳಗಿನ ಇಡಗುಂಜಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ – ಅಂದಾಜು 20 ಲಕ್ಷದಷ್ಟು ಹಾನಿ  

ಹೊನ್ನಾವರ ಮಾರ್ಚ್‌ 17 : ತಾಲೂಕಿನ ಕೆಳಗಿನ ಇಡಗುಂಜಿ ಗ್ರಾಮದ ಮಾಳ್ಕೋಡ್ ಅಣ್ಣಯ್ಯ ಸುಬ್ರಾಯ ಆಚಾರಿ ಇವರ ಮನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಮೂಲಕ  ಬೆಂಕಿ ತಗುಲಿ ಮನೆಯ ಮೆಲ್ಚಾವಣೆ ಸುಟ್ಟು ಕರಕಲಾಗಿದೆ.

ಅಂದಾಜು 20 ಲಕ್ಷದಷ್ಟು ಹಾನಿ ಸಂಭವಿಸಿರುವ ಸಾಧ್ಯತೆ ಇದೆ. ಕೂಡಲೇ ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿಪತ್ತು ನಿರ್ವಹಣಾ ಘಟಕದವರು  ಬೆಂಕಿ ನಂದಿಸಲು ನೆರವಾದರು. ಅಗ್ನಿಶಾಮಕದಳದವರು ನಂತರ ಸಂಪೂರ್ಣ ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ.