ಮುಂಡಗೋಡ: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನ ಮಳಗಿ ಗ್ರಾಮದ ಇಂದಿರಾನಗರ ಹತ್ತಿರ ಬೃಹತ್ ಆಕಾರದ ಮರವೊಂದು ರಸ್ತೆಯ ಮೇಲೆ ಬಿದ್ದು ಒಂದು ಗಂಟೆಗೂ ಹೆಚ್ವು ಹೊತ್ತಿನಿಂದ ಹುಬ್ಬಳ್ಳಿ-ಶಿರಸಿ ರಸ್ತೆ ಸಂಚಾರ ಬಂದ್ ಆಗಿದೆ.
ಕಳೆದ ಎಂಟು ದಿನಗಳಿಂದ ವಿಪರೀತವಾಗಿ ಸುರಿಯುತ್ತಿದ್ದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಅನೇಕ ಮನೆಗಳು ಶಾಲಾ ಕೊಠಡಿಗಳು ಹಾನಿಯಾಗಿವೆ. ರೈತರ ಗದ್ದೆಗಳಲ್ಲಿ ನೀರು ನಿಂತು ಅನೇಕ ರೈತರ ಗದ್ದೆಗಳು ಜಲಾವೃತಗೊಂಡಿವೆ. ಹಾಗೂ ಕೆರೆಕಟ್ಟೆಗಳು ತುಂಬಿ ಒಂದು ಎರಡು ಕೆರೆಗಳು ಒಡ್ಡು ಒಡೆದಿವೆ.
ಸೋಮವಾರ ಮಳಗಿ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರಸ್ತೆಯ ಪಕ್ಕದಲ್ಲಿರುವ ಬೃಹತ್ ಆಕಾರದ ಮರವೊಂದು ಬಿದ್ದು ಒಂದು ಗಂಟೆಗು ಹೆಚ್ಚು ಹೊತ್ತಿನಿಂದ ರಸ್ತೆ ಸಂಚಾರ ಬಂದಾಗಿದೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯವರು ಹಾಗೂ ಸಾರ್ವಜನಿಕರು ಬಿದ್ದ ಮರವನ್ನು ತೆರವು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಸುಮಾರು ಒಂದು ಕಿಲೋಮೀಟರನಷ್ಟು ವಾಹನಗಳು ಮುಂದೆ ಹೋಗದೆ ನಿಂತಿವೆ ಎಂದು ಮಳಗಿ ಗ್ರಾಮದ ಸ್ಥಳಿಯ ಯುವಕ ಮಂಜುನಾಥ ಮೇದರ ತಿಳಿಸಿದರು.