Mamata banerjee: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಹಣೆಗೆ ಗಾಯವಾಗಿರುವ ಫೋಟೊವನ್ನು ಟಿಎಂಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ. ಗಾಯದಿಂದ ರಕ್ತ ಸೋರುತ್ತಿದೆ. ಮಮತಾ ಅವರನ್ನು SSKM ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಮಮತಾ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೊಲ್ಕತ್ತಾ, ಮಾರ್ಚ್ 14 : ಪಶ್ಚಿಮ ಬಂಗಾಳ (West Bengal) ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಅವರ ಹಣೆಗೆ ಗಾಯವಾಗಿ ರಕ್ತಬರುತ್ತಿರುವ ಫೋಟೊವೊಂದನ್ನು ಟಿಎಂಸಿ (TMC) ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹಂಚಿಕೊಂಡಿದೆ. ನಮ್ಮ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರಿಗೆ ಗಂಭೀರ ಗಾಯಗಳಾಗಿವೆ. ನಿಮ್ಮ ಪ್ರಾರ್ಥನೆ ಇರಲಿ ಎಂದು ಟಿಎಂಸಿ ಟ್ವೀಟ್ ಮಾಡಿದೆ. ಅವರನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಅವರು ಮನೆಯಲ್ಲಿ ಬಿದ್ದಿದ್ದಾರೆ. ಕುಟುಂಬಸ್ಥರು, ಪಕ್ಷದ ಮುಖಂಡರು ಆಸ್ಪತ್ರೆಗೆ ಬರುತ್ತಿದ್ದಾರೆ. ಮುಖ್ಯ ಕಾರ್ಯದರ್ಶಿ, ಕೋಲ್ಕತ್ತಾ ಮೇಯರ್ ಆಗಮಿಸಿದ್ದಾರೆ. ಮಮತಾ ಬ್ಯಾನರ್ಜಿ ಈ ದಿನ ನಬಣ್ಣಗೆ ಹೋಗಿದ್ದರು. ಅಲ್ಲಿಂದ ಎಕ್ಡಾಲಿಯಾಗೆ ಹೋಗಿ ದಿವಂಗತ ಸುಬ್ರತಾ ಮುಖೋಪಾಧ್ಯಾಯ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಆ ಬಳಿಕ ಮಮತಾ ಮನೆಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ ಎಂದು ಟಿವಿ9 ಬಾಂಗ್ಲಾ ವರದಿ ಮಾಡಿದೆ.