ಹೊನ್ನಾವರ ಮಾರ್ಚ್ 13 : ತಾಲೂಕಿನ ಮಂಕಿ ಬಣಸಾಲೆಯ ಮೀನು ಮಾರುಕಟ್ಟೆ ಸಮೀಪ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊರ್ವ ಓಸಿ, ಮಟಕಾ, ಜೂಗಾರಾಟ ಆಡಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ.
ಆರೋಪಿತ ವ್ಯಕ್ತಿ ಕಾಸರಕೋಡ್ ದೇವಸ್ಥಾನ ಕೇರಿಯ ಈಶ್ವರ್ ಬಡ್ಕಾ ಗೌಡ, ಇನ್ನೊರ್ವ ಮಂಕಿ ಮುಲೆಕೇರಿಯ ಸಂತೋಷ ನಾಯ್ಕ ಎಂದು ಗುರುತಿಸಲಾಗಿದೆ. ದಾಳಿಯ ವೇಳೆ ಆರೋಪಿತರಿಂದ ಒಟ್ಟು 1,200 ರೂಪಾಯಿ ನಗದು, ಓ.ಸಿ. ಮಟಕಾ ಸಂಖ್ಯೆಗಳನ್ನು ಬರೆದ ಚೀಟಿ 1, ಬಾಲಪೆನ್ನು1 ಇವುಗಳೊಂದಿಗೆ ಸಿಕ್ಕಿಬಿದ್ದಿದ್ದಾರೆ.
ಆರೋಪಿತ ಸಂತೋಷ ನಾಯ್ಕ ಎಂಬಾತ ಈಶ್ವರ್ ಬಡ್ಕಾ ಗೌಡನಿಂದ ಹಣ ಮತ್ತು ಓ.ಸಿ ಚೀಟಿ ಪಡೆದು ಕೊಳ್ಳುವವನಾಗಿದ್ದರಿಂದ ಆರೋಪಿತರಿಬ್ಬರ ಮೇಲೂ ಕಲಂ. 78 (3) ಕೆ.ಪಿ. ಆಕ್ಟ ಅಡಿಯಲ್ಲಿ ಮಂಕಿ ಠಾಣೆಯಲ್ಲಿ ದೂರು ದಾಖಲಾಗಿದೆ.