ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಆಟಗಾರ್ತಿಯರು ರೆಟ್ರೋ ಲುಕ್ನಲ್ಲಿ ಪಬ್ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ಬೆಂಗಳೂರು: 2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ(ಡಬ್ಲ್ಯುಪಿಎಲ್)(WPL 2024) ಉತ್ತಮ ಪ್ರದರ್ಶನ ತೋರುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿಯರು(Royal Challengers Bangalore Women) ರೆಟ್ರೋ ಲುಕ್ನಲ್ಲಿ ಪಬ್ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಈ ಆಟಗಾರ್ತಿಯರು ಚಿಲ್ ಮಾಡಿದ ಫೋಟೊ ಮತ್ತು ವಿಡಿಯೊವನ್ನು ಆರ್ಸಿಬಿ(RCB) ತನ್ನ ಅಧಿಕೃತ ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದೆ.
ಕನ್ನಡತಿ ಶ್ರೇಯಾಂಕ ಪಾಟೀಲ್(Shreyanka Patil) ಮತ್ತು ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ(Ellyse Perry) ಸಾಂಪ್ರದಾಯಿಕ ಉಡುಗೆ ತೊಟ್ಟು ಕಣ್ಮನ ಸೆಳೆದಿದ್ದಾರೆ. ಅದರಲ್ಲೂ ಎಲ್ಲಿಸ್ ಪೆರ್ರಿ ಸಾರಿ ಉಟ್ಟು ಅಪ್ಪಟ ಭಾರತೀಯ ನಾರಿಯಂತೆ ಕಂಡಿದ್ದಾರೆ. ಅವರ ಲುಕ್ ಕಂಡು ಆರ್ಸಿಬಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಸ್ಮೃತಿ ಮಂದಾನ(Smriti Mandhana) ನೇತೃತ್ವದ ಆರ್ಸಿಬಿ ತಂಡ ರೆಟ್ರೋ ನೈಟ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದರಲ್ಲಿ ಭಾಗವಹಿಸಿದ ಆಟಗಾರ್ತಿಯರು ಎಂಜಾಯ್ ಮಾಡಿದ್ದಾರೆ. ರಿಚಾ ಘೋಷ್(Richa Ghosh), ಸೋಫಿ ಡಿವೈನ್(Sophie Devine), ಜಾರ್ಜಿಯಾ ವೇರ್ಹ್ಯಾಮ್ ಕ್ಲಾಸಿಕ್ ಕುಣಿದು ಕುಪ್ಪಳಿಸಿದ್ದಾರೆ. ಇದೇ ವೇಳೆ ನಾಯಕಿ ಮಂದಾನ ಪಿಚ್ಚರ್ ಅಭೀ ಬಾಕಿ ಹೈ ಮೇರಿ ದೋಸ್ತ್ ಎಂದು ಕ್ಯೂಟ್ ಆಗಿ ಹೇಳಿದ್ದಾರೆ.
ಪ್ರಸಕ್ತ ಟೂರ್ನಿಯಲ್ಲಿ ಇನ್ನು 5 ಲೀಗ್ ಪಂದ್ಯಗಳು ಮಾತ್ರ ಬಾಕಿ ಇದ್ದು, ಸದ್ಯ ಆರ್ಸಿಬಿ ಆಡಿದ 6 ಪಂದ್ಯಗಳ ಪೈಲಿ ತಲಾ 3 ಗೆಲುವು ಮತ್ತು ಸೋಲು ಕಂಡು 6 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. ನಾಳೆ ನಡೆಯುವ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಸ್ಮೃತಿ ಮಂದಾನ ಈ ಬಾರಿಯ ಲೀಗ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಪ್ರತಿ ಪಂದ್ಯದಲ್ಲಿಯೂ ತಂಡಕ್ಕೆ ನೆರವಾಗುತ್ತಿದ್ದಾರೆ.
ಇಂದು ನಡೆಯುವ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ಪಂದ್ಯದಲ್ಲಿ ಮುಂಬೈ ಗೆದ್ದರೆ 10 ಅಂಕದೊಂದಿಗೆ ಅಗ್ರಸ್ಥಾನಕ್ಕೇರಲಿದೆ. ಗುಜರಾತ್ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಈ ಪಂದ್ಯ ಗೆದ್ದರೆ ಮಾತ್ರ ಪ್ಲೇ ಆಫ್ ರೇಸ್ನಲ್ಲಿ ಉಳಿದುಕೊಳ್ಳಲಿದೆ. ಸೋತರೆ ಬಹುತೇಕ ಲೀಗ್ನಿಂದ ಹೊರಬೀಳಲಿದೆ. ಹೀಗಾಗಿ ಈ ಪಂದ್ಯ ರೋಚಕತೆಯಿಂದ ಸಾಗುವ ನಿರೀಕ್ಷೆಯೊಂದನ್ನು ಮಾಡಬಹುದು.