IPL 2024 : ಆರ್​ಸಿಬಿ ಅನ್​ಬಾಕ್ಸ್​ ಟಿಕೆಟ್​ ಮಾರಾಟ ಶುರು, ಎಲ್ಲಿ ಮಾಡಬಹುದು ಖರೀದಿ?

IPL 2024: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಆರ್​ಸಿಬಿ ಅನ್​ಬಾಕ್ಸ್​ ಈವೆಂಟ್​ನ ಟಿಕೆಟ್​ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಬೆಂಗಳೂರು ಮಾರ್ಚ್‌ 9 : ಐಪಿಎಲ್ 2024 ಕ್ಕೆ ಸ್ವಲ್ಪ ಮುಂಚಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (IPL 2024) ತಮ್ಮ ಆರ್​​ಸಿಬಿ ಅನ್​​ಬಾಕ್ಸ್​ ಮೂಲಕ ಮರಳುತ್ತಿದೆ. ಮಾರ್ಚ್ 19ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಟಿಕೆಟ್ ಗಳು ಮಾರ್ಚ್ 9 ರಂದು ಮಾರಾಟವಾಗಲಿವೆ. ಪ್ರತಿ ವರ್ಷದಂತೆ, ಆರ್​ಸಿಬಿ ಮತ್ತೊಮ್ಮೆ ತಮ್ಮ ಹೊಸ ಅಭಿಯಾನದ ಪ್ರಾರಂಭಕ್ಕೆ ಮುಂಚಿತವಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಆರ್​ಸಿಬಿ ತನ್ನ ಅಭಿಮಾನಿಗಳನ್ನು ತಂಡದ 12 ನೇ ಆಟಗಾರ ಎಂದು ಪರಿಗಣಿಸುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರ್ಚ್ 22ರಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಆರ್​​​ಸಿಬಿ ಅನ್​ಬಾಕ್ಸ್​ ಟಿಕೆಟ್ ಬುಕ್ ಮಾಡುವುದು ಹೇಗೆ?
ಆರ್​​ಸಿಬಿ ಅಭಿಮಾನಿಗಳು ಮತ್ತು ಬೆಂಬಲಿಗರು ಅನ್​ಬಾಕ್ಸ್​ ಈವೆಂಟ್​ನಲ್ಲಿ ಭಾಗವಹಿಸಬಹುದು. ಅದಕ್ಕಾಗಿ ಅವರು ಟಿಕೆಟ್ ಖರೀದಿಸಬೇಕಾಗುತ್ತದೆ. ಈವೆಂಟ್​​ನ ಟಿಕೆಟ್​ಗಳನ್ನು ಆರ್​ಸಿಬಿ ವೆಬ್​ಸೈಟ್​​ ಮತ್ತು ಆರ್​ಸಿಬಿ ಅಪ್ಲಿಕೇಶನ್​ ಮೂಲಕ ಖರೀದಿಸಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀಗಿದೆ
ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಾಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೊರ್, ಕರಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವಿಜಯಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟಾಪ್ಲೆ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮೆರಾನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರ್ರನ್, ಲಾಕಿ ಫರ್ಗುಸನ್.