ಕಾರವಾರ : ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆ ಬಾಲರಾಮನ ದರ್ಶನಕ್ಕೆ ರೈಲಿನ ಮೂಲಕ ತೆರಳುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಯಾತ್ರಾರ್ಥಿಗಳಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ರೂಪಾಲಿ ಎಸ್ ನಾಯ್ಕ, ಶುಭ ಹಾರೈಸಿ ಬೀಳ್ಕೊಟ್ಟರು..
ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ ಸುಮಾರು 47 ಯಾತ್ರಿಗಳು ಅಯೋಧ್ಯೆಗೆ ತೆರಳುತ್ತಿದ್ದು, ಕಾರವಾರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಯಾತ್ರಾರ್ಥಿಗಳನ್ನು ರೂಪಾಲಿ ಎಸ್.ನಾಯ್ಕ ಅವರು, ಆತ್ಮೀಯತೆಯಿಂದ ಬರಮಾಡಿಕೊಂಡು, ಎಲ್ಲರಿಗೂ ಕೇಸರಿ ಶಾಲನ್ನು ನೀಡಿ ಶುಭ ಹಾರೈಸಿದ್ರು…
ಬಳಿಕ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷರು ಅಯೋಧ್ಯೆ ಬಾಲರಾಮನ ದರ್ಶನ ಮಾಡಲು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಅವಕಾಶ ಕಲ್ಪಿಸಿದ್ದಾರೆ. ಹಂತ ಹಂತವಾಗಿ ಮುಂದಿನ ದಿನದಲ್ಲಿ ಎಲ್ಲರೂ ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ. ಈಗ ತೆರಳುತ್ತಿರುವ ಪ್ರಯಾಣಿಕರು ಒಬ್ಬರಿಗೊಬ್ಬರು ಸಹಾಯ ಸಹಕಾರ ಮಾಡುತ್ತ ಜಾಗೃತೆ ವಹಿಸಬೇಕು. ಬಾಲರಾಮನ ದರ್ಶನ ಪಡೆದು ಸಂತೃಪ್ತರಾಗಿ ಎಂದು ಹೇಳಿದ್ರು…
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು, ನಿಕಟಪೂರ್ವ ಜಿಲ್ಲಾಧ್ಯಕ್ಷರು, ಕಾರವಾರ ನಗರ, ಗ್ರಾಮೀಣ ಹಾಗೂ ಅಂಕೋಲಾ ಮಂಡಲದ ಅಧ್ಯಕ್ಷರುಗಳು, ಪದಾಧಿಕಾರಿಗಳು, ಕಾರ್ಯಕರ್ತರು, ಪ್ರಮುಖರು ರಾಜ್ಯ ಬಿಜೆಪಿ ಉಪಾಧ್ಯಕ್ಷರೊಂದಿಗೆ ಉಪಸ್ಥಿತರಿದ್ದರು…