ಗೃಹ ಬಳಕೆ ವಿದ್ಯುತ್ ದರ ಪ್ರತಿ ಯುನಿಟ್ ಗೆ 1.10 ರೂಪಾಯಿ ಇಳಿಕೆ!

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ದರ ಪ್ರತಿ ಯುನಿಟ್ ಗೆ 110 ರೂಪಾಯಿ ಇಳಿಕೆ ಮಾಡಿದೆ. 15 ವರ್ಷಗಳಲ್ಲಿ ಮೊದಲ ಬಾರಿಗೆ ವಿದ್ಯುತ್ ದರ ಇಳಿಕೆಯಾಗಿದೆ.

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ದರ ಪ್ರತಿ ಯುನಿಟ್ ಗೆ 110 ರೂಪಾಯಿ ಇಳಿಕೆ ಮಾಡಿದೆ. 15 ವರ್ಷಗಳಲ್ಲಿ ಮೊದಲ ಬಾರಿಗೆ ವಿದ್ಯುತ್ ದರ ಇಳಿಕೆಯಾಗಿದೆ. ಏ.1 ರಿಂದ ಗೃಹ ಬಳಕೆ ವಿದ್ಯುತ್ ದರ ಪ್ರತಿ ಯುನಿಟ್ ಗೆ 5.90 ರೂಪಾಯಿಗಳಾಗಲಿದೆ. ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಈ ದರ ಕಡಿತದಿಂದ ಯಾವುದೇ ಬದಲಾವಣೆಯೂ ಆಗುವುದಿಲ್ಲ.

ವಾಣಿಜ್ಯ ಗ್ರಾಹಕರಿಗೆ ಪ್ರತಿ ಯೂನಿಟ್ ಗೆ 125 ಪೈಸೆ ಕಡಿಮೆ ಮಾಡಲಾಗಿದ್ದು, ಪ್ರತಿ ಕೆವಿಎ ಗೆ ಡಿಮ್ಯಾಂಡ್ ಚಾರ್ಜ್ ಗಳನ್ನು 10 ರೂ ಕಡಿಮೆ ಮಾಡಲಾಗಿದೆ. ಕೈಗಾರಿಕಾ ಗ್ರಾಹಕರಿಗೆ ಪ್ರತಿ ಯುನಿಟ್ ಗೆ 50 ಪೈಸೆ ಕಡಿಮೆಯಾಗಿದೆ.

ಇಂಧನ ಇಲಾಖೆಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ವಿವರಿಸಿದ್ದು, ವಿದ್ಯುತ್ ದರದಲ್ಲಿ ಪರಿಷ್ಕರಣೆ ಮತ್ತು ಕಡಿತವು ಚುನಾವಣೆಗಳಿಂದಲ್ಲ ಎಂದು ಹೇಳಿದ್ದಾರೆ.