ಅಂಕೋಲಾ: ನಾಡಿನ ನಾಮಾಂಕಿತ ಸಾಹಿತಿ ವಿಷ್ಣು ನಾಯ್ಕ ನಿಧನಕ್ಕೆ ಸಂತಾಪ ಸೂಚಿಸಿ ಪಟ್ಟಣದ ನಾಮಧಾರಿ ಸಭಾಭವನದಲ್ಲಿ ನಾಮಧಾರಿ ಸಮಾಜದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮೌನಚರಣೆಯಿಂದ ಕಾರ್ಯಕ್ರಮವನ್ನು ಆರಂಭಿಸಲಾಯಿತು. ವಕೀಲ ಉಮೇಶ ನಾಯ್ಕ ಮಾತನಾಡಿ, ವಿಷ್ಣು ನಾಯ್ಕ ಸಮಾಜದ ಧೀಮಂತ ಸಾಹಿತಿ. ಅವರ ನಿಧನ ನಮ್ಮ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಕರ್ನಾಟಕ ರತ್ನ ಪ್ರಶಸ್ತಿ ಪಡೆಯುವ ಮೂಲಕ ಸಮಾಜಕ್ಕೆ ಹೆಮ್ಮೆ ತಂದಿದ್ದರು ಎಂದರು.
ನಾಮಧಾರಿ ಅಭಿವೃದ್ಧಿ ಸಂಘ (ರಿ.) ಇದರ ಅಧ್ಯಕ್ಷರಾದ ನಾಗೇಶ ವಿ. ನಾಯ್ಕ(ಅಚಾ) ಮಾತನಾಡಿ,ನಾವು ನಮ್ಮ ಸಮಾಜದ ಅತಿ ಮುಖ್ಯ ವ್ಯಕ್ತಿಯನ್ನ ಕಳೆದುಕೊಂಡಿದ್ದೇವೆ. ಅದರ ದುಃಖವನ್ನು ಸಹಿಸುವ ಶಕ್ತಿ ಅವರ ಕುಟುಂಬಕ್ಕೆ ಮತ್ತು ನಮ್ಮ ಸಮಾಜಕ್ಕೆ ಕೊಡಲಿ ಅಂತ ದೇವರಲ್ಲಿ ಪ್ರಾರ್ಥಿಸೋಣ ಎಂದರು.
ಜಟ್ಟಿ ಬಿ. ನಾಯ್ಕ ತೆಂಕಣಕೇರಿ ಇವರು ಮಾತನಾಡಿ ಶೋಕ ವ್ಯಕ್ತಪಡಿಸಿದರು. ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ವಿಶ್ವನಾಥ್ ಟಿ. ನಾಯ್ಕ, ಬಂಡಿಬಜಾರ್, ನಾಮಧಾರಿ ದಹಿಂಕಾಲ ಉತ್ಸವದ ಹಾಲಿ ಅಧ್ಯಕ್ಷರಾದ ಮಂಜುನಾಥ ನಾಯ್ಕ , ಬೇಳಾ, ವೆಂಕಪ್ಪ ಟಿ ನಾಯ್ಕ, ಬೊಬ್ರುವಾಡಾ, ಉಮೇಶ ಬಿ ನಾಯ್ಕ, ಗಣಪತಿ ಬಿ. ನಾಯ್ಕ ಹನುಮಟ್ಟ , ಉದಯ ರಾಮಚಂದ್ರ ನಾಯ್ಕ, ಹೊನ್ನೇಕೇರಿ, ಉದಯ ನಾಯ್ಕ ಹೊಸಗದ್ದೆ, ಮೋಹನ ಎಚ್. ನಾಯ್ಕ ಅಂಬಾರಕೊಡ್ಲ, ರಮೇಶ ಎಸ್. ನಾಯ್ಕ ತೆಂಕಣಕೇರಿ, ನಾರಾಯಣ ಪಿ. ನಾಯ್ಕ ಕಲಭಾಗ ಮುಂತಾದವರು ಇದ್ದರು. ಶ್ರೀಧರ ನಾಯ್ಕ, ಬೆಳಂಬಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕೊನೆಯಲ್ಲಿ ವಂದಿಸಿದರು.