ರಾಷ್ಟ್ರಮಟ್ಟದ ಪುಟ್ಭಾಲ್ ಸ್ಪರ್ಧೆಯಲ್ಲಿ ಹೊನ್ನಾವರ ವಿದ್ಯಾರ್ಥಿನಿಯರ ಸಾಧನೆ

“ಶಿಕ್ಷಣ ಇಲಾಖೆ” ಹಾಗೂ “ಎನೇಬ್ಲಿಂಗ್ ಲೀಡರಶಿಪ್” ಸಂಸ್ಥೆಯ ಸಹಯೋಗದೊಂದಿಗೆ ದಿನಾಂಕ 17 ಮತ್ತು 18, ಫೆಬ್ರವರಿ 2024 ರಂದು ಬೆಂಗಳೂರಿನ “ಸೇಂಟ್ ಜೋಸೆಫ್ ಯೂನಿವರ್ಸಿಟಿ” ಯಲ್ಲಿ ನಡೆದ “ಎನೇಬ್ಲಿಂಗ್ ಲೀಡರಶಿಪ್” ಸಂಸ್ಥೆಯ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಸ್ಪರ್ಧೆಯಲ್ಲಿ ಹೊನ್ನಾವರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊದಕೆ ಶಿರೂರಿನ ಹಾಗೂ ಸರಕಾರಿ ಪ್ರೌಢಶಾಲೆ ಹೊದಕೆ ನ ವಿದ್ಯಾರ್ಥಿನಿಯರು ಎರಡನೇ ಸ್ಥಾನ ಪಡೆಯುವುದರ ಮುಖಾಂತರ ಶಾಲೆ ಮತ್ತು ಗ್ರಾಮಕ್ಕೆ ಗೌರವವನ್ನು ತಂದುಕೊಟ್ಟಿದ್ದಾರೆ.

ಎರೆಡೂ ಶಾಲೆಯ ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಮಕ್ಕಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.