ಅಂಕೋಲಾದಲ್ಲಿ ಪದೋನ್ನತ ರವಿ ಕೋಟೆಬಾವಿಯವರಿಗೆ ಸಂಘ-ಸಂಸ್ಥೆಗಳಿಂದ ಸನ್ಮಾನ

ಅಂಕೋಲಾ: ತಾಲ್ಲೂಕು ಉಪ ಖಜಾನೆಯಲ್ಲಿ ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದ ಕೋಟೆಬಾವಿಯವರು ಯಲ್ಲಾಪುರ ತಾಲೂಕು ಉಪಖಜಾನಾಧಿಕಾರಿಯಾಗಿ ಪದೋನ್ನತಿ ಹೊಂದಿ, ವರ್ಗಾವಣೆಯಾದ ನಿಮಿತ್ತ ಸರಕಾರಿ ನೌಕರರ ಸಂಘ ಅಂಕೋಲಾ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಉಪಖಜಾನೆ ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರವಿ ಕೋಟೆಬಾವಿ, ಅಂಕೋಲೆಯಲ್ಲಿ ಸಲ್ಲಿಸಿದ ಸೇವೆ ನನಗೆ ತೃಪ್ತಿ ನೀಡಿದೆ. ಇದು ನನ್ನ ಹುಟ್ಟೂರು. ಮುಂದಿನ ದಿನಗಳಲ್ಲಿಯೂ ಅಂಕೋಲೆ ಉಪಖಜಾನೆಯಲ್ಲಿ ಕೆಲಸ ನಿರ್ವಹಿಸುವ ಬಗ್ಗೆ ಆಸಕ್ತಿ ಇದೆ. ಆತ್ಮೀಯರು ಮತ್ತು ಸಂಘ- ಸಂಸ್ಥೆಗಳು ಪ್ರೀತಿಯಿಂದ ಸನ್ಮಾನಿಸಿ ಗೌರವಿಸಿ ಬೀಳ್ಕೊಡುತ್ತಿರುವುದು ಸಂತಸ ತಂದಿದೆ ಎಂದರು.

ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಚಂದ್ರ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರವಿ ಕೋಟೆಬಾವಿಯವರ ಸೇವಾ ಮನೋಭಾವನೆಗೆ ಕುಟುಂಬದ ಪ್ರಭಾವವು ಸಾಕಷ್ಟಿದೆ. ಅಂಕೋಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ. ನಾಯಕ ಹೋಸ್ಕೆರಿ ಮಾತನಾಡಿ, ರವಿ ಕೋಟೆಬಾವಿಯವರು ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದ್ದಾರೆ. ಶಿಕ್ಷಕರ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿದ್ದಾರೆ. ಅವರ ಸೇವೆ ಸ್ಮರಣೀಯವಾದುದು ಎಂದರಲ್ಲದೇ ಮುಂದೆಯೂ ಸಹ ಅಂಕೋಲಾ ಉಪ ಖಜಾನೆಗೆ ಅವರ ಸೇವೆ ದೊರೆಯುವಂತಾಗಲಿ ಎಂದರು.

ಉಪಖಜಾನಾಧಿಕಾರಿ ಕೃಷ್ಣ ಎನ್. ಗೊಂಡ ಅಭಿನಂದಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ನಿಕಟ ಪೂರ್ವ ಅಧ್ಯಕ್ಷ ದೇವರಾಜ ಗೋಳಿಕಟ್ಟೆ, ಉಪನ್ಯಾಸಕ ಮಂಜುನಾಥ ಕೇಣಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರಾದ ತುಕಾರಾಮ ಬಂಟ, ಸಂಜೀವ ಆರ್. ನಾಯಕ, ಆನಂದು ವಿ. ನಾಯ್ಕ, ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಪ್ರಮೋದ ದೊಡ್ಡನೆ, ಕಾರ್ಯದರ್ಶಿ ಗಣಪತಿ ನಾಯಕ, ಅರವಿಂದ ನಾಯ್ಕ, ಅಂಕೋಲಾ ಉಪಖಜಾನಾಧಿಕಾರಿಗಳ ಕಾರ್ಯಾಲಯದ ಪ್ರಿಯಾ ಗಾಂವಕರ, ಶಿವಾಜಿ ಪಮ್ಮಾರ, ಅವಿನಾಶ ಶರ್ಮಾ ಮುಂತಾದವರು ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ರಾಜು ಎಚ್. ನಾಯಕ ಸ್ವಾಗತಿಸಿದರು. ಸದಸ್ಯೆ ಶೋಭಾ ಎಸ್. ನಾಯಕ ನಿರ್ವಹಿಸಿದರು. ವಿನೋದ ಹರಿಕಾಂತ ನಿರ್ವಹಿಸಿದರು.