ಕುಮಟಾದ ದಿವಗಿಯಲ್ಲಿ ಸಂಭ್ರಮ ಸಡಗರದಿಂದ ಜರುಗಿದ ಸವಿ ಫೌಂಡೇಶನ್‌ನ ವಾರ್ಷಿಕೋತ್ಸವ

ಕುಮಟಾ : ತಾಲೂಕಿನ ದಿವಗಿಯಲ್ಲಿ ಸವಿ ಫೌಂಡೇಶನ್‌ನ ವಾರ್ಷಿಕೋತ್ಸವ ಕಾರ್ಯಕ್ರಮ ಸಂಭ್ರಮ ಸಡಗರದಿಂದ ಜರುಗಿತು. ಮಂಗಳೂರು ನಗರದ ನಿವೃತ್ತ ಉಪ ಪೊಲೀಸ್‌ ಆಯುಕ್ತರಾದ ವಿನಯ್‌ ಗಾಂವ್ಕರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ವಿನಯ್‌ ಗಾಂವಕರ್‌ ಅವರು, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪ್ರತಿಯೊಬ್ಬರಿಗೆ ಸಿಗುವ ಹಾಗೆ ತಿಳುವಳಿಕೆ ನೀಡುವ ಕಾರ್ಯ ನಡೆಯಬೇಕು. ಈ ವಿಚಾರದಲ್ಲಿ ಸವಿ ಫೌಂಡೇಶನ್ ಸೇವೆ ಶ್ಲಾಘನೀಯವಾದದ್ದು ಎಂದು ಹೇಳಿದ್ರು…

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದ ಖ್ಯಾತ ನ್ಯಾಯವಾದಿ ನಾಗರಾಜ ನಾಯಕ ಬಾಸಗೋಡ, ಇಂದಿನ ಯುವಕರಲ್ಲಿ ಒಳ್ಳೆಯ ಕೆಲಸಗಳಿಗೆ ಎದೆಗೊಡುವ ಧೈರ್ಯದ ಒರತೆ ಸದಾ ಚಿಮ್ಮುತ್ತಿರಬೇಕು ಜಿಲ್ಲೆಯ ಅಭಿವೃದ್ಧಿ ಯಲ್ಲಿ ಯುವಕರ ಪಾತ್ರ ವಿಷಯದ ಕುರಿತು ಮನೋಜ್ಞವಾಗಿ ಮಾತನಾಡಿದರು. ಇದೇ ವೇಳೆ ಸವಿ ಫೌಂಡೇಶನ್ ವತಿಯಿಂದ ನಾಗರಾಜ ನಾಯಕರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎನ್‌.ಟಿ. ಪ್ರಮೋದ ರಾವ್ ಹಿರೇಗುತ್ತಿ, ಯಾವುದೇ ಕಾರ್ಯ ಕಾರ್ಯರೂಪಕ್ಕೆ ಬಂದಾಗ ಯಶಸ್ಸು ಸಾಧ್ಯ ಸೇವೆಯ ಪ್ರತಿಫಲ ಸೇವೆಯೇ ಆಗಿದೆ ಎಂದರು. ಸವಿ ಫೌಂಡೇಶನ್ ಅಧ್ಯಕ್ಷ ಡಾ.ಸಂದೀಪ ಜಯರಾಮ ನಾಯಕ ಫೌಂಡೇಶನ್ ಸ್ಥಾಪನೆಯ ಉದ್ದೇಶದ ಕುರಿತು ಮಾತನಾಡಿದರು..

ಕಾರ್ಯಕ್ರಮದ ವೇದಿಕೆಯಲ್ಲಿ ಸವಿ ಫೌಂಡೇಶನ್ ಟ್ರಸ್ಟಿ ರತನ್ ಗಾಂವಕರ ಹಾಗೂ ಹಾಗೂ ಸವಿ ಫೌಂಡೇಶನ್ ಟ್ರಸ್ಟಿ ನಿತೀಶ್ ನಾಯಕ‌ ಉಪಸಿತರಿದ್ದರು. ಶ್ರೀಮತಿ ಅನಿತಾ ನಿತೀಶ್ ನಾಯಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸವಿ ಫೌಂಡೇಶನ್ ಟ್ರಸ್ಟಿ ರತನ್ ಗಾಂವಕರ ಸರ್ವರನ್ನು ಸ್ವಾಗತಿಸಿದರು. ಸವಿ ಫೌಂಡೇಶನ್ ಕಾರ್ಯದರ್ಶಿ ಶ್ರೀಮತಿ ವಿದ್ಯಾ ನಾಯಕ ವರದಿ ವಾಚಿಸಿದರು. ಉಪನ್ಯಾಸಕಿ ಶ್ರೀಮತಿ ಅನಿತಾ ನಿತೀಶ್ ನಾಯಕ ಅತಿಥಿ ಪರಿಚಯ ಮಾಡಿದರು. ಎನ್ ರಾಮು ಹಿರೇಗುತ್ತಿ  ಕಾರ್ಯಕ್ರಮ ನಿರೂಪಣೆ ಮಾಡಿದರು. ಸವಿ ಫೌಂಡೇಶನ್ ಟ್ರಸ್ಟಿ ನಿತೀಶ್ ನಾಯಕ ವಂದಿಸಿದರು..

ಕಾರ್ಯಕ್ರಮದಲ್ಲಿ  ಬೀರಣ್ಣ ಮೋನಪ್ಪ ನಾಯಕ, ನಂದಾ ನಾಯಕ, ಬೊಮ್ಮಯ್ಯ ನಾಯಕ ಬೊಮ್ಮನ್, ನಾಗೇಶ ಟಿ ನಾಯಕ, ರೇವತಿ ರಾವ್ .ಎನ್. ಟಿ‌. ನವೀರ್  ರಾಜ, ಶಿವರಾಯ ನಾಯಕ, ಹರೀಶ ನಾಯಕ, ಕುಮಾರ ಕವರಿ, ಉಮೇಶ ಕೇ ನಾಯಕ, ರಾಜೇಶ ನಾಯಕ ಮೊಗಟಾವಿಶ್ವನಾಥ.ಬೇವಿನಕಟ್ಟಿ, ಮಹಾದೇವ ಗೌಡ, ವಿನು ಗಾಂವಕರ, ಗಣಪತಿ ‌ನಾಯಕ ಮೊದಲಾದವರು ಪಾಲ್ಗೊಂಡಿದ್ರು. ಅರ್ಥಪೂರ್ಣ ಕಾರ್ಯಕ್ರಮದ ಪ್ರಯೋಜನವನ್ನು ಎಲ್ಲರೂ ಪಡೆದುಕೊಂಡರು