ಅಂಕೋಲಾದಲ್ಲಿ ಕವಿ ವಿಷ್ಣು ನಾಯ್ಕ ಅವರಿಗೆ ನುಡಿ ನಮನ

ಅಂಕೋಲಾ: ನಾಡಿನ ಸಾರಸ್ವತ ಲೋಕದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೆಸರನ್ನು ಬೆಳಗಿದ ಹೊಸ ತಲೆಮಾರಿನ ಲೇಖಕರಲ್ಲಿ ವಿಷ್ಣು ನಾಯ್ಕರು ಮುಖ್ಯರಾಗಿದ್ದರೆ ಎಂದು ಸಾಹಿತಿ ಮೋಹನ ಹಬ್ಬು ಹೇಳಿದರು.
ಭಾನುವಾರ ಸಂಜೆ ಪಟ್ಟಣದ ಗೋಖಲೆ ಸೆಂಟೆನರಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್, ದಿನಕರ ವೇದಿಕೆ ಮತ್ತು ದಿನಕರ ಪ್ರತಿಷ್ಠಾನ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ವಿಷ್ಣು ನಾಯ್ಕ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಕ.ಸಾ. ಪ. ತಾಲ್ಲೂಕು ಘಟಕ ಅಧ್ಯಕ್ಷ ಗೋಪಾಲಕೃಷ್ನ ನಾಯಕ ಮಾತನಾಡಿ, ಹಲವಾರು ಯುವ ಲೇಖಕರನ್ನು ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಸಾಹಿತಿ ರಾಮಕೃಷ್ಣ ಗುಂದಿ ಮಾತನಾಡಿ ಸಾಹಿತ್ಯ ಸಂಘಟನೆ ಮತ್ತು ರಾಘವೇಂದ್ರ ಪ್ರಕಾಶನ ಮೂಲಕ ಸಾಂಸ್ಕೃತಿಕ ಕ್ರಾಂತಿಯನ್ನು ವಿಷ್ಣು ನಡೆಸಿದರು ಎಂದರು.
ಪ್ರಾಚಾರ್ಯ ಸಿದ್ದಲಿಂಗಸ್ವಾಮಿ ವಸ್ತ್ರದ “ದಿನಕರ ದೇಸಾಯಿ ಅವರ ಸಮಾಜವಾದಿ ಸಿದ್ದಾಂತವನ್ನು ವಿಷ್ಣು ನಾಯ್ಕ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು” ಎಂದರು.
ಜಿಲ್ಲಾ ಕ. ಸಾ. ಪ. ಕಾರ್ಯದರ್ಶಿ ಪಿ. ಆರ್. ನಾಯ್ಕ, ದಿನಕರ ವೇದಿಕೆಯ ಆರ್. ವಿ. ಕೇಣಿ,ಸಾಹಿತಿಗಳಾದ ಕೃಷ್ಣ ನಾಯಕ, ಜೆ. ಪ್ರೇಮಾನಂದ, ಶಿವಾನಂದ ನಾಯಕ, ಮಹೇಶ ನಾಯಕ, ನಾಗೇಂದ್ರ ನಾಯಕ, ಶ್ಯಾಮ ಸುಂದರ ಗೌಡ, ರಾಜೇಶ್ ನಾಯ್ಕ,ಪಾಲ್ಗುಣ ಗೌಡ, ಮಹಾಂತೇಶ ರೇವಡಿ, ಕೆನರಾ ವೆಲ್ಫೇರ್ ಟ್ರಸ್ಟಿನ ಜಂಟಿ ಕಾರ್ಯದರ್ಶಿ ಪ್ರಶಾಂತ್ ರಾವ್,ಮಾತನಾಡಿದರು.ಸೋಮಶೇಖರ್ ಸಜ್ಜನ, ನಾಗರಾಜ್ ದಿವಗಿಕರ್ ಸಹಕರಿಸಿದರು.