ಸರ್ಕಾರದ ಅನುದಾನ ವ್ಯಪಗತವಾಗದಂತೆ ಕ್ರಮವಹಿಸಿ; ವಿನೋದ್ ಅಣ್ವೇಕರ್

 ಕಾರವಾರ:- 2023-24 ನೇ ಸಾಲಿನ ಆರ್ಥಿಕ ವರ್ಷದಲ್ಲಿ ವಿವಿಧ ಇಲಾಖೆಗಳಿಗೆ ಮಂಜೂರಾದ ಸರ್ಕಾರದ ಯಾವುದೇ ಅನುದಾನ ಯಾವುದೇ ಇಲಾಖೆಯಲ್ಲಿ ವ್ಯಪಗತವಾಗದಂತೆ ಕ್ರಮವಹಿಸಿ ಪ್ರಗತಿ ಸಾಧಿಸಲು ತಾಲೂಕ ಪಂಚಾಯತ ಆಡಳಿತ ಅಧಿಕಾರಿ

ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ವಿನೋದ್ ಅಣ್ವೇಕರ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

 ಅವರು ಗುರುವಾರ ಹೊನ್ನಾವರ ತಾಲೂಕ ಪಂಚಾಯತ ಸಭಾಭವನದಲ್ಲಿ ನಡೆದ ತಾಲೂಕು

ಪಂಚಾಯತ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 ಆರೋಗ್ಯ ,ಶಿಕ್ಷಣ, ಕೃಷಿ, ಕುಡಿಯುವ ನೀರು ಮತ್ತು ನೈರ್ಮಲ್ಯ, ಪಂಚಾಯತ್ ರಾಜ್, ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ಹೆಸ್ಕಾಂತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಿದರು.

 ಕಡ್ಲೆ ಗ್ರಾಮ ಪಂಚಾಯಿತಿ ಗೋಡೆಗೇರಿ ನಿವಾಸಿ ಅತ್ಯಂತ ಬಡ ಕುಟುಂಬದ ಏಕಾಂಗಿ ಮಹಿಳೆಯಾದ ಶ್ರೀಮತಿ ನಾಗವೇಣಿ ಎಂ ಶೆಟ್ಟಿಯವರಿಗೆ ಬಸವ ವಸತಿ ಯೋಜನೆಯಡಿ ನಿರ್ಮಿಸಿದ ಮನೆ ಪೂರ್ಣಗೊಳಿಸಲು ವೈಯಕ್ತಿಕವಾಗಿ 21 ಸಾವಿರ ರೂಪಾಯಿ ಸಹಾಯಧನ ನೀಡುವುದಾಗಿ ಭರವಸೆ ನೀಡಿ 11 ಸಾವಿರ ರೂಪಾಯಿ ಚೆಕ್‌ನ್ನು ವಿತರಿಸಿ ಉಳಿದ 10 ಸಾವಿರ ರೂಪಾಯಿಯನ್ನು

ಮುಂದಿನ ಹಂತದ ಕಾಮಗಾರಿಗೆ ನೀಡುವುದಾಗಿ ತಿಳಿಸಿ, ಸಾಮಾಜಿಕ ಕಳಕಳಿ ಮೆರೆದು ಇತರೆ ಅಧಿಕಾರಿಗಳಿಗೆ ಮಾದರಿಯಾದರು.

 ಹೊನ್ನಾವರ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಜಿ.ಎಸ್. ನಾಯ್ಕ ರವರು ಮಾತನಾಡಿ ತಾಲೂಕಿನಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದು ಯಾವುದೇ ಅನುದಾನ ವ್ಯಪಗತವಾಗದಂತೆ ನಿರಂತರ ಅನುಸರಣೆಯ ಮೂಲಕ ಕ್ರಮ

ವಹಿಸಲು ತಿಳಿಸಿದರು. ತಾಲೂಕು ಪಂಚಾಯತ ನರೇಗಾ ಸಹಾಯಕ ನಿರ್ದೇಶಕ ಕೃಷ್ಣಾನಂದ ಕೆ, ವ್ಯವಸ್ಥಾಪಕರಾದ ರಾಮ ಭಟ್ ಉಪಸ್ಥಿತರಿದ್ದರು. ತಾಲೂಕ ಪಂಚಾಯತ ಸಿಬ್ಬಂದಿ ಬಾಲಚಂದ್ರ ನಾಯ್ಕ ಸ್ವಾಗತಿಸಿದರು.