ಕಾರವಾರ : ಸಮಗ್ರ ರಾಜ್ಯ, ಅದರಲ್ಲೂ ಉತ್ತರ ಕರ್ನಾಟಕ, ಉತ್ತರ ಕನ್ನಡ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರಕ್ಕೆ ಈ ಬಜೆಟ್ ನಲ್ಲಿ ಭಾರಿ ಅನ್ಯಾಯ ಆಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಹೇಳಿದ್ರು.
ರಾಜ್ಯದ ಅಭಿವೃದ್ಧಿಗೆ ಈ ಬಜೆಟ್ ಪೂರಕವಾಗಿಲ್ಲ. ಇದೊಂದು ರಾಜ್ಯದ ಪ್ರಗತಿಯ ವಿರೋಧಿ ಬಜೆಟ್ ಆಗಿದೆ. ಮುಖ್ಯವಾಗಿ ನಮ್ಮ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬಗ್ಗೆ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪ ಇಲ್ಲ. ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸುವ ಘೋಷಣೆಯೂ ಇಲ್ಲ. ಆ ಮೂಲಕ ಜಿಲ್ಲೆಯ ಆರೋಗ್ಯವನ್ನೇ ಹದಗೆಡಿಸಿದ್ದಾರೆ. ತಮ್ಮದೆ ಸರ್ಕಾರ ಇದ್ದರೂ ಕಾಂಗ್ರೆಸ್ ಶಾಸಕರು ಕಾರವಾರ ಅಂಕೋಲಾ ಕ್ಷೇತ್ರಕ್ಕೆ ಯಾವುದೇ ಜನಪರ ಯೋಜನೆಯನ್ನು ಬಜೆಟ್ ನಲ್ಲಿ ಸೇರ್ಪಡೆ ಮಾಡಿಸಲು ವಿಫಲರಾಗಿದ್ದಾರೆ.
ಇದೊಂದು ನಿರಾಶಾದಾಯಕ ಬಜೆಟ್. ಉತ್ತರ ಕರ್ನಾಟಕ, ಜಿಲ್ಲೆಯ ಹಾಗೂ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿಸಿದ ಬಜೆಟ್ ಇದಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷರು, ಹಾಗೂ ಮಾಜಿ ಶಾಸಕಿ ಶ್ರೀಮತಿ ರೂಪಾಲಿ ಎಸ್.ನಾಯ್ಕ ತಿಳಿಸಿದ್ರು..