ರಥ ಸಪ್ತಮಿ ಪ್ರಯುಕ್ತ ಫೆ.16 ಕ್ಕೆ ಸಾಮೂಹಿಕ ಸೂರ್ಯ ನಮಸ್ಕಾರ.


ಅಂಕೋಲಾ :
ಪತಂಜಲಿ ಯೋಗ ಸಮಿತಿ, ಅಂಕೋಲಾ ಹಾಗೂ ಪಿ ಎಮ್ ಹೈಸ್ಕೂಲ್ ಎನ್ ಸಿ ಸಿ ಘಟಕ ಇವರ ಸಹಯೋಗದಲ್ಲಿ ರಥ ಸಪ್ತಮಿ ಪ್ರಯುಕ್ತ ಫೆಬ್ರುವರಿ 16 ರಂದು ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಪಿ ಎಮ್ ಪ್ರೌಢಶಾಲೆಯ ಆವರಣದಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 108 ಸೂರ್ಯ ನಮಸ್ಕಾರ ಕಡ್ಡಾಯವಿರುವದಿಲ್ಲ. ತಮ್ಮ ತಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಮಾಡಬಹುದು. ವಯಸ್ಸಿನ ಮಿತಿ ಇಲ್ಲದೆ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಲು ಅವಕಾಶವಿದೆ. ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಭಾಗವಹಿಸುವವರು ಸಡಿಲವಾದ ಶುಭ್ರ ಬಟ್ಟೆ ಧರಿಸಿ ಯೋಗ ಮ್ಯಾಟ್ ಅಥವಾ ಜಮಖಾನೆಯನ್ನು ತರಬೇಕು. ಹೆಸರನ್ನು ನೊಂದಾಯಿಸಲು ಬಯಸುವವರು ಮೊ.ನಂ. 9964555547, 6360452737, 9448530799 ಇವರನ್ನು ಸಂಪರ್ಕಿಸಬಹುದಾಗಿದೆ.