ದಾಂಡೇಲಿಯಲ್ಲಿ ರಾಜ್ಯ‌ಮಟ್ಟದ ದೇಹದಾಡ್ಯ ಸ್ಪರ್ಧೆಗೆ ಆರ್.ವಿ.ದೇಶಪಾಂಡೆ ಚಾಲನೆ


ದಾಂಡೇಲಿ ಫಿಟ್ನೆಸ್ ಲ್ಯಾಬಿನ ಆಶ್ರಯದಡಿ ನಗರದ ಹಳೆ ನಗರಸಭೆಯ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ದೇಹದಾಡ್ಯ ಸ್ಪರ್ಧೆಗೆ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆಯವರು ಚಾಲನೆಯನ್ನು ನೀಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆರ್.ವಿ.ದೇಶಪಾಂಡೆಯವರು ಪ್ರತಿಯೊಂದು ಸಾಧನೆಗೂ ಆರೋಗ್ಯ ಬಹುಮುಖ್ಯ. ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ದೈಹಿಕವಾಗಿ ಚೆನ್ನಾಗಿದ್ದರೆ ಮಾತ್ರ ಮಾನಸಿಕವಾಗಿ ಸದೃಢರಾಗಿರಬಹುದು. ಈ ನಿಟ್ಟಿನಲ್ಲಿ ಯುವಕರು ಸಾಧನೆಗೆ ಹೆಚ್ಚು ಒತ್ತು ಕೊಡಬೇಕು ಎಂದರು. ಪ್ರವಾಸೊದ್ಯಮವಾಗಿ ಬೆಳೆಯುತ್ತಿರುವ ನಗರದಲ್ಲಿ ಇಂತಹ ರಾಜ್ಯಮಟ್ಟದ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳುತ್ತಿರುವುದು ಉತ್ತಮವಾದ ಬೆಳವಣಿಗೆ ಎಂದರು.



ಅಂತರಾಷ್ಟ್ರೀಯ ದೇಹದಾಡ್ಯ ತರಬೇತುದಾರರಾದ ಪ್ರೊ.ಜಿ.ಡಿ.ಭಟ್ ಅವರು ದೇಹದಾಡ್ಯ ಕಸರತ್ತಿನಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳನ್ನು ತಿಳಿಸಿ, ಪಂದ್ಯಾವಳಿಯ ಉದ್ದೇಶವನ್ನು ವಿವರಿಸಿದರು.

ವೇದಿಕೆಯಲ್ಲಿ ಗೋವಾದ ದೇಹದಾಡ್ಯ ಪಟು ನಾವೇದ್, ಯು ಎಸ್ ಪಾಟೀಲ್, ಅಧ್ಯಕ್ಷರಾದ ವಿ.ಆರ್. ಹೆಗಡೆ ,ಕೃಷ್ಣ ಪಾಟೀಲ್ , ಉಸ್ಮಾನ್ ಮುನ್ನ ವಹಾಬ್, ಅಜರ್ ಬಸರಿಕಟ್ಟಿ, ರಮೇಶ ನಾಯ್ಕ, ಶಮಲ್ ಅಬ್ದುಲ್ಲಾ, ಕರೀಂ ಖತೀಬ್, ವೀರೇಶ್ ಯರಗೇರಿ, ರಿಯಾಜ್ ಬಾಬು ಸೈಯದ್, ಅನ್ವರ್ ಪಠಾಣ್ ಹಾಗೂ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ದೇಹದಾಡ್ಯ ತರಬೇತುದಾರರು ಉಪಸ್ಥಿತರಿದ್ದರು.ಪಂದ್ಯಾವಳಿಯಲ್ಲಿ ರಾಜ್ಯದ ವಿವಿದೆಡೆಗಳಿಂದ 150 ಕ್ಕೂ ಅಧಿಕ ದೇಹದಾಡ್ಯ ಪಟುಗಳು ಭಾಗವಹಿಸಿದ್ದರು.