ಹಳೆ ದಾಂಡೇಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಅಂಬೇವಾಡಿಯ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಎಂ.ಡಿ.ಒಕ್ಕುಂದ ಉದ್ಘಾಟಿಸಿದರು.
ಮಾತನಾಡಿದ ಅವರು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಉನ್ನತಿಗಾಗಿ ಶ್ರಮವಹಿಸಿ ದುಡಿಯುವ ತಂದೆ ತಾಯಿಗಳ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸತತ ಅಧ್ಯಯನಶೀಲರಾಗಬೇಕು. ನಮ್ಮ ಕಾಲಘಟ್ಟದಲ್ಲಿದ್ದ ಕಷ್ಟಗಳು ಇವತ್ತಿನ ವಿದ್ಯಾರ್ಥಿಗಳಿಗೆ ಇಲ್ಲ. ಓದಿಗೆ ವಿಪುಲವಾದ ಅವಕಾಶಗಳಿವೆ. ಓದಿನ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಅಕ್ಷರ ಬದುಕನ್ನು ಬದಲಾಯಿಸುವ ಆಯುಧ ಅದನ್ನು ಬಳಸಿಕೊಂಡು ಉನ್ನತಿ ಸಾಧಿಸಿ ಎಂದರು.
ಸರ್ಕಾರಿ ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ನಾಸೀರ್ ಅಹ್ಮದ ಜಂಗೂಭಾಯಿ ಮಾತನಾಡಿ ತಂದೆ, ತಾಯಿ ಶಿಕ್ಷಕರು ನಿಮ್ಮ ಜೀವನಕ್ಕೆ ಉತ್ತಮ ಮಾರ್ಗದರ್ಶಕರಾಗಿದ್ದು, ಅವರ ಕನಸುಗಳನ್ನು ನನಸು ಮಾಡಿದರೆ ಅವರು ಪಡುವಷ್ಟು ಖುಷಿ ಯಾರು ಪಡುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಅಬ್ದುಲ್ ಕರಿಂ ಮುಲ್ಲಾ, ಫ್ರೌಡ ಶಾಲೆಯ ಮುಖ್ಯೋಪಾಧ್ಯಾಯನಿ ಜಯಾ ನಾಯ್ಕ, ವಿದ್ಯಾರ್ಥಿ ಪ್ರತಿನಿಧಿಗಳಾದ ಸ್ಮುತಿ ನಾಯ್ಕ, ದಿನೇಶ ದೊಡ್ಡಮನಿ ವೇದಿಕೆಯಲ್ಲಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ನಾಗರೇಖಾ ಗಾಂವಕರ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಸುಮಂಗಲಾ ನಾಯ್ಕ, ಅನಿಲ ರೇಗೊ, ಪ್ರಶಾಂತ ಜಾದವ್,ರಾಧಿಕಾ ಚೋಪಡೆ, ಸುಜಾತಾ ನಾಯ್ಕ, ಶಶಿಕಲಾ ಬನ್ನಿಗೋಳ,ಉಷಾ ಸಳಗಾವಂಕರ,ಗೌರಿ ಚಲವಾದಿ, ಪ್ರವೀಣಕುಮಾರ ಸುಲಾಖೆ, ಅನಿತಾ ಅನಗವಾದಲ , ಸುಜಾತಾ ವಾಲಿಗರಿ ಇದ್ದರು.