ಭಟ್ಕಳ ಸರ್ಕಾರಿ ಆಸ್ಪತ್ರೆ ಯಲ್ಲಿ ಮಹಿಳೆಯೊರ್ವರ ಹೊಟ್ಟೆಯಲ್ಲಿ ಕೆಜಿ ಗಡ್ಡೆ ಶಸ್ತ್ರ ಚಿಕಿತ್ಸೆ ಯಶಸ್ವಿ


ಭಟ್ಕಳ ಸರ್ಕಾರಿ ಆಸ್ಪತ್ರೆ ಯಲ್ಲಿ ದಾಖಲಾಗಿರುವ ಮಹಿಳೆಯೊರ್ವರ ಹೊಟ್ಟೆಯಲ್ಲಿರುವ ಸುಮಾರು 5 ಕೆಜಿ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಹೊರತೆಗೆದಿದ್ದು ಇದೀಗ ಮಹಿಳೆ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ.



ಮುರುಡೇಶ್ವರ ಜನತಾ ಕಾಲೊನಿಯ 21 ವರ್ಷದ ಮಹಿಳೆಯೊರ್ವರು ಕೆಲವು ದಿನಗಳ ಹಿಂದೆ ಹೊಟ್ಟೆನೋವಿನಿಂದ ಬರಲುತ್ತಿದ್ದ ಹಿನ್ನೆಲೆಯಲ್ಲಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಪರೀಕ್ಷಿಸಿದ ಸ್ತ್ರೀರೋಗ ತಜ್ಞ ಡಾ ಸಹನ ಕುಮಾರ್ ಹೊಟ್ಟೆಯಲ್ಲಿ ಗಡ್ಡೆಯಾಗಿರುವದನ್ನು ಪತ್ತೆ ಹಚ್ಚಿದ್ದರು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಮಹಿಳೆಯ ಹೊಟ್ಟೆಯಲ್ಲಿರುವ ಅಂದಾಜು 5 ಕೆಜಿ ಗಡ್ಡೆಯನ್ನು ಹೊರತೆಗೆದಿದ್ದಾರೆ.ಚಿಕಿತ್ಸೆಯ ಬಳಿಕ ಮಹಿಳೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಸರಕಾರಿ ಆಸ್ಪತ್ರೆಯ ಆಡಳಿತ ಮುಖ್ಯಸ್ಥೆ ಹಾಗೂ ಅರವಳಿಕೆ ತಜ್ಞೆ ಡಾ.ಸವಿತಾ ಕಾಮತ್ ಮತ್ತು ಡಾ ಸಹನ ಕುಮಾರ್ ಕಾರ್ಯಕ್ಕೆ ನಾಗರಿಕರು ಅಭಿನಂದಿಸಿದ್ದಾರೆ.