ದಾಂಡೇಲಿ ನಗರ ಠಾಣೆಯ ಪಿಎಸ್ಐ ಯಲ್ಲಪ್ಪ.ಎಸ್ ಶಿರಸಿಗೆ ವರ್ಗಾವಣೆ

ದಾಂಡೇಲಿ : ನಗರ ಪೊಲೀಸ್ ಠಾಣೆಯ ತನಿಖಾ‌ವಿಭಾಗದ ಪಿಎಸ್ಐ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದ ಯಲ್ಲಪ್ಪ.ಎಸ್ ಅವರನ್ನು ಶಿರಸಿಗೆ ವರ್ಗಾವಣೆಗೊಳಿಸಲಾಗಿದೆ.

ದಾಂಡೇಲಿ ನಗರ ಠಾಣೆಯ ಪಿಎಸ್ಐ ಆಗಿ ಸೇವೆಯನ್ನು ಸಲ್ಲಿಸಿ, ಶಿರಸಿಗೆ ವರ್ಗಾವಣೆಗೊಂಡು ‌ನಂತರ ಅಲ್ಲಿಂದ ಮತ್ತೇ ದಾಂಡೇಲಿ‌ ನಗರ ಪೊಲೀಸ್ ಠಾಣೆಯ ತನಿಖಾ ವಿಭಾಗದ ಪಿಎಸ್ಐ ಆಗಿ ಯಲ್ಲಪ್ಪ.ಎಸ್ ಅವರು ಕಳೆದ ಒಂದು ವರ್ಷದಿಂದ ಸೇವೆಯನ್ನು ಸಲ್ಲಿಸುತ್ತಿದ್ದರು.

ಯಲ್ಲಪ್ಪ.ಎಸ್ ಅವರು ಬಡ ಬಗ್ಗರ ಹಾಗೂ ಜನಸಾಮಾನ್ಯರ ಬಗ್ಗೆ ಅಪಾರವಾದ ಕಾಳಜಿ ಮತ್ತು ಪ್ರೀತಿಯನ್ನಿಟ್ಟುಕೊಂಡವರು. ಇದೀಗ ಬರಲಿರುವ ಲೋಕಸಭಾ ಚುನಾವಣೆಯ ನಿಮಿತ್ತ ಅವರನ್ನು ಶಿರಸಿಯ ಗ್ರಾಮೀಣ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.