ದಾಂಡೇಲಿ : ತಾಲೂಕು ಘೋಷಣೆಯಾಗುವ ಮುನ್ನವೇ ಮೊಟ್ಟ ಮೊದಲ ವಿಶೇಷ ತಹಶೀಲ್ದಾರ್ ಆಗಿ ನೇಮಕಗೊಂಡು, ದಾಂಡೇಲಿ ತಾಲೂಕು ಘೋಷಣೆಯಾದ ನಂತರ ತಹಶೀಲ್ದಾರ್ ಆಗಿ ಭಡ್ತಿಗೊಂಡು ತಾಲೂಕಿನ ಮೊಟ್ಟಮೊದಲ ತಹಶೀಲ್ದಾರರಾಗಿ ಕಳೆದ ಐದಾರು ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಜನಮೆಚ್ಚುಗೆಯ ಜನಪ್ರಿಯ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರನ್ನು ಮೂಡಿಗೇರೆ ತಾಲೂಕಿನ ತಹಶೀಲ್ದಾರರನ್ನಾಗಿ ವರ್ಗಾವಣೆಗೊಳಿಸಲಾಗಿದೆ.
ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸುವ ಮೂಲಕ ಜನಮನದ ಅಧಿಕಾರಿ ಎಂಬ ಗೌರವಕ್ಕೆ ಶೈಲೇಶ್ ಪರಮಾನಂದ ಅವರು ಪಾತ್ರರಾಗಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ನಗುಮೊಗದ ಹಾಗೂ ಸರಳತೆಯ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರನ್ನು ಬರಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದ್ದು, ಕಂದಾಯ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಮುಕ್ತರ ಪಾಷಾ ಎಚ್.ಜಿ ಅವರು ಈ ವರ್ಗಾವಣೆ ಆದೇಶವನ್ನು ಹೊರಡಿಸಿದ್ದಾರೆ.