ಮನೆಗೆ ಬಂದ ಪುನುಗು ಬೆಕ್ಕು

ಅಂಕೋಲಾ: ತಾಲೂಕಿನ ಮಂಜಗುಣಿಯ ಮನೆಯೊಂದರಲ್ಲಿ ಕಂಡು ಬಂದ ಅಪರೂಪದ ವನ್ಯಜೀವಿ ಪುನುಗು ಬೆಕ್ಕಗಳನ್ನು
ಅರಣ್ಯ ಇಲಾಖೆಯ ಸಿಬ್ಬಂದಿಗಳು
ಸಂರಕ್ಷಿಸಿ ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.
ಮಂಜಗುಣಿಯ ನಿವಾಸಿ ಸಂಜಯ ನಾಯ್ಕ ಎನ್ನುವವರ ಮನೆಯ ಅಟ್ಟದ ಮೇಲೆ ಮೂರು ಪುನುಗು ಬೆಕ್ಕುಗಳು ಕಂಡು ಬಂದಿದ್ದು ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ನುರಿತ ವನ್ಯಜೀವಿ ರಕ್ಷಕರ ಸಹಾಯದಿಂದ ಮನೆಯೊಳಗೆ ಇದ್ದ ಪುನುಗು ಬೆಕ್ಕುಗಳನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.
ಡಿ.ಸಿ.ಎಫ್ ರವಿಶಂಕರ್, ಎ.ಸಿ.ಎಫ್ ಕೃಷ್ಣ ಅಣ್ಣಯ್ಯ ಗೌಡ ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಆರ್. ಎಚ್. ನಾಯ್ಕ, ಅರಣ್ಯ ರಕ್ಷಕ ಸಿದ್ಧಣ್ಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.