ಕಾರವಾರ : 75ನೇ ಗಣರಾಜ್ಯೋತ್ಸವದ ಅಂಗವಾಗಿ ಭಾರತೀಯ ಜನತಾ ಪಕ್ಷ ಕಾರವಾರ ನಗರ ಹಾಗೂ ಗ್ರಾಮೀಣ ಮಂಡಲ ವತಿಯಿಂದ ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಗರ ಅಧ್ಯಕ್ಷ ನಾಗೇಶ್ ಕುರುಡೇಕರ್ ಧ್ವಜಾರೋಹಣ ನೆರವೇರಿಸಿದ್ರು..
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಾಗೇಶ ಕುರುಡೇಕರ್, ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ, ಮನೋಜ್ ಭಟ್, ನಯನಾ ನಿಲಾವರ್, ಇಂದು 500 ವರ್ಷದ ಐತಿಹಾಸಿಕ ನಿರ್ಣಯ ಶ್ರೀ ರಾಮ ಮಂದಿರ ಪ್ರತಿಷ್ಠಾಪನೆ ಆಗಿದ್ದು, ಇಡೀ ದೇಶ ಸಂತೋಷದ ಸಂಭ್ರಮಾಚರಣೆ ಇದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಭಿವೃದ್ಧಿಯಲ್ಲಿ ಹಾಗು ದೇಶದ ಉನ್ನತಿಗಾಗಿ ನಿರಂತರ ಕೆಲಸ ಮಾಡುತ್ತಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ 400 ಕಿಂತ ಹೆಚ್ಚು ಸ್ಥಾನ ಪಡೆಯಬೇಕಾದರೆ ನಮ್ಮ ಲೋಕಸಭಾ ಕ್ಷೇತ್ರಕ್ಕೆ ನಮ್ಮ ಅಭ್ಯರ್ಥಿಯನ್ನು ಹೆಚ್ಚಿನ ಮತಗಳಿಂದ ಆರಿಸಿ ತರಬೇಕು ಇದಕ್ಕೆ ಕಾರ್ಯಕರ್ತರು ಪ್ರತಿ ಬೂತ್ ಮಟ್ಟದಲ್ಲಿ ಕೆಲಸ ಮಾಡುವ ಮೂಲಕ ಪ್ರಧಾನಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು, ಜನರಿಗೆ ತಲುಪಿಸಬೇಕು ಎಂದು ಹೇಳಿದ್ರು..
ನಂತರ ರಾಜ್ಯ ಮಟ್ಟಕ್ಕೆ ಹೊರ ರಾಜ್ಯ ಮಟ್ಟಕ್ಕೆ ಭರತ ನಾಟ್ಯ ಪ್ರಶಸ್ತಿ ಪಡೆದ ಎಸ್. ಸುಪ್ರಿಯಾ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ವೇಳೆ ಕಾರವಾರ ನಗರದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಕಿಶನ್ ಕಾಂಬಳೆ, ಗ್ರಾಮೀಣ ಬಿಜೆಪಿ ಮುಖಂಡರು, ಪ್ರಮುಖರು, ಪದಾಧಿಕಾರಿಗಳು, ನಗರಸಭೆ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ಎಲ್ಲಾ ಮೋರ್ಚಾದವರು, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರು, ಭೂತ ಅಧ್ಯಕ್ಷರು, ಕಾರ್ಯಕರ್ತರು, ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು…