ವಿವಾದಾತ್ಮಕ ಪೋಸ್ಟ್ ಶೇರ್: ಮೂವರ ವಿರುದ್ದ ದೂರು ದಾಖಲು

ಅಂಕೋಲಾ : ಪಟ್ಟಣದ ಹುಲಿದೇವರವಾಡದ ಯುವಕನೋರ್ವ ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿ ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವಿಷಯಕ್ಕೆ ಸಂಭಂದಿಸಿದಂತೆ ಮೂವರ ವಿರುದ್ದ ಪೊಲೀಸರು ದೂರು ದಾಖಲಿಸಿದ್ದಾರೆ.
ಬುಧವಾರ ಪೋಲಿಸ್ ಠಾಣೆಯ ಆವರಣದಲ್ಲಿ ನೂರಾರು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಹಿನ್ನಲೆ ಪ್ರಮುಖ ಆರೋಪಿ ಜಾಫರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಪೊಲೀಸರು ರಾತ್ರಿ ಇದೇ ಮಾದರಿಯ ಪೋಸ್ಟ್ ಶೇರ್ ಮಾಡಿದ್ದ ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Official_jafar78, faizan646_shk ಮತ್ತು azmat_02 ಎನ್ನುವ ಮೂವರು ಇನ್ಸ್ಟಾಗ್ರಾಮ್ ಖಾತೆದಾರರ ಮೇಲೆ ದೂರು ದಾಖಲಾಗಿದೆ.
“Sabar jab waqt hamara aayega Tab sir dhad se alag kiye jayenge” ಎಂಬ ಹೇಳಿಕೆಯನ್ನು ಬರೆದುಕೊಂಡಿರುವಂತಹ ಫೋಟೋವನ್ನು ಮೂವರು ತಮ್ಮ ಇನಸ್ಟಾಗ್ರಾಂ ಅಕೌಂಟ ಖಾತೆಯಲ್ಲಿ ಹಾಕಿಕೊಂಡಿದ್ದರು. “ಸಮಾಧಾನದಿಂದ ಇರಿ ಸಮಯ ಬರುತ್ತದೆ ಆಗ ದೇಹದಿಂದ ತಲೆ ಬೇರೆ ಮಾಡುತ್ತೇವೆ” ಎನ್ನುವ ಅರ್ಥವನ್ನು ಇದು ನೀಡುತ್ತಿದ್ದು ಪೊಟೋದಲ್ಲಿನ ಪದಗಳು ಹಿಂದೂ ಮುಸ್ಲಿಂ ಧರ್ಮದ ಮಧ್ಯ ದ್ವೇಷ ಹುಟ್ಟಿಸುವ, ಹಿಂದೂ ಸಮುದಾಯದ ಜನರಿಗೆ ಪ್ರಚೋಧಿಸುವ, ಭಾವನೆಗಳಿಗೆ ಧಕ್ಕೆ ಬರುವ ಹಾಗೂ ಸಾರ್ವಜನಿಕರ ಶಾಂತಿ ಕದಡುವ ಉದ್ದೇಶವಿರುವ ಕಾರಣ ಹಾಗೂ ವೈರತ್ವ ದ್ವೇಷ ಅಥವಾ ವೈಮನಸ್ಸು ಹುಟ್ಟಿಸುವ ಉದ್ದೇಶದಿಂದ ಪ್ರಚಾರ ಮಾಡಿರುವ ಆರೋಪದಿಂದ ದೂರು ದಾಖಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಐಪಿಸಿ ಸೆಕ್ಷನ್ 153(ಎ), 295(ಎ), 505(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಎಸ್ ಐಗಳಾದ ಉದ್ದಪ್ಪ ಧರೆಪ್ಪನವರ್ ಹಾಗೂ ಸುಹಾಸ್ ಆರ್ ತನಿಖೆ ಕೈಗೊಂಡಿದ್ದಾರೆ.