ದಾಂಡೇಲಿ : ರಾಜ್ಯ ಸಚಿವ ಸಂಪುಟದ ದರ್ಜೆಯ ಸ್ಥಾನಮಾನ ಹೊಂದಿರುವ “ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕ ಆರ್.ವಿ. ದೇಶಪಾಂಡೆಯವರನ್ನು ನಗರದ ಸಮಾನಮನಸ್ಕ ಗೆಳೆಯರ ಬಳಗದ ವತಿಯಿಂದ ಅಭಿನಂದಿಸುವ ಕಾರ್ಯಕ್ರಮವನ್ನು ಜನವರಿ 25ರ ಸಂಜೆ 5 ಗಂಟೆಗೆ ಬಂಗೂರನಗರದ ಡಿಲಕ್ಸ್ ಹೋಟೆಲ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ತಮ್ಮ ತಮ್ಮ ಸಂಘಟನೆಗಳಿಂದ ಆರ್.ವಿ.ದೇಶಪಾಂಡೆಯವರನ್ನು ಅಭಿನಂದಿಸಲು ಅವಕಾಶವಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಘಟಕರು ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.