ದಾಂಡೇಲಿ : ನಗರದಲ್ಲಿ ಬಹುತೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವರದೊಂದು ರಂಗೋಲಿ ಬೇಕು. ಅದು ಬೇಕು ಎನ್ನುವುದಕ್ಕಿಂತಲೂ ಅವರು ಇಷ್ಟಪಟ್ಟು ಅತ್ಯಂತ ಶ್ರದ್ಧೆಯಿಂದ ಆ ಕಾರ್ಯವನ್ನು ಮಾಡುವಂತಹ ವ್ಯಕ್ತಿತ್ವವನ್ನು ಹೊಂದಿದವರು. ಅವರು ಬೇರೆ ಯಾರು ಅಲ್ಲ ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಧಿಕಾರಿ ಜಿಲ್ಲೆಯ ಹೆಸರಾಂತ ಚಿತ್ರ ಕಲಾವಿದ ಜಿ.ಎಸ್.ರಾಣೆಯವರು.
ಅಂದ ಹಾಗೆ ಸೋಮವಾರ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ನಿಮಿತವಾಗಿ ನಗರದಲ್ಲಿರುವ ಏಕೈಕ ಬಂಗೂರನಗರದ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಸ್ವಾಮಿಯ ಸನ್ನಿಧಿಯ ಮುಂಭಾಗದಲ್ಲಿ ಜಿ.ಎಸ್ ರಾಣೆಯವರು ಪ್ರಭು ಶ್ರೀರಾಮನ ಚಿತ್ರವಿರುವ ರಂಗೋಲಿಯನ್ನು ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಒಟ್ಟಿನಲ್ಲಿ ಜಿ.ಎಸ್ ರಾಣೆಯವರ ಕುಂಚದಿಂದ ಅರಳಿದ ಪ್ರಭು ಶ್ರೀರಾಮನ ವೈವಿಧ್ಯಮಯವಾದ ಚಿತ್ರ ಶ್ರೀರಾಮ ಮಂದಿರದಲ್ಲಿ ನಡೆದ ಕಾರ್ಯಕ್ರಮಕ್ಕೆ ವಿಶೇಷವಾದ ಮೆರುಗನ್ನು ತಂದುಕೊಟ್ಟಿತು.