ಯಲ್ಲಾಪುರ: ತಾಲೂಕಿನಲ್ಲಿ ರಾಮ ಅಕ್ಷತಾ ಅಭಿಯಾನ ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ನಾರಾಯಣ ನಾಯಕ ಹೇಳಿದರು.
ಅವರು ಗುರುವಾರ ಈ ಕುರಿತು ಮಾಹಿತಿ ನೀಡಿ, ತಾಲೂಕಿನಲ್ಲಿ ೯೭ ಗ್ರಾಮದಲ್ಲಿ ೧೮ ಸಾವಿರ ಮನೆಗಳ ಸಂಪರ್ಕಿಸಿ ,೭೦೦ ಕಾರ್ಯಕರ್ತರು ಅಭಿಯಾನಕ್ಕೆ ಶ್ರಮಿಸಿದ್ದಾರೆ.
೧೨೦ ಕ್ಕೂ ಹೆಚ್ಚು ದೇವಸ್ಥಾನ ಇದ್ದು,ಅದರಲ್ಲಿ ಜ ೨೨ ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಪ್ರತಿಷ್ಠೆಯ ಸಂದರ್ಭದಲ್ಲಿ ಪ್ರತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಪ್ರಾರ್ಥನೆ,ರಾಮ ಭಜನೆ,ರಾಮ ತಾರಕ ಹೋಮ ನಡೆಯಲಿದೆ. ನಂತರ ಪ್ರಸಾದ ವಿತರಣೆ ನಡೆಯಲಿದೆ. ಕೆಲವು ದೇಶಗಳಲ್ಲಿ ರಾಮಮಂದಿರ ಕಾರ್ಯಕ್ರಮದ ನೇರ ಪ್ರಸಾರ ನಡೆಯಲಿದೆ. ಮಂಜುನಾಥ ನಗರದಲ್ಲಿ ವಿಶೇಷ ಪೂಜೆ ಅನ್ನ ಸಂತರ್ಪಣೆ,ರಾತ್ರಿ ದೀಪೋತ್ಸವ ನಡೆಯಲಿದೆ. ವಿಶ್ವಹಿಂದೂ ಪರಿಷತ್ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ. ಶಕ್ತಿ ಗಣಪತಿ ದೇವಸ್ಥಾನದಲ್ಲಿ ರಾಮತಾರಕ ಹೋಮ ಪ್ರಸಾದ ವಿತರಣೆ ಇದೆ ಎಂದರು.ಗ್ರಾಮದೇವಿ ದೇವಸ್ಥಾನ,ಕಲ್ಮಠದಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ.
ಪ್ರಮುಖವಾದ ಅನಂತ ಗಾಂವ್ಕಾರ ಕಂಚಿಪಾಲ್, ಗಜಾನನ ನಾಯ್ಕ,ಸೋಮೇಶ್ವರ ನಾಯ್ಕ,ನಾಗೇಶ್ ಯಲ್ಲಾಪುರಕರ್,ರಜನಿ ಚಂದ್ರಶೇಖರ ಇದ್ದರು.