ಹೊನ್ನಾವರ : ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿಯ ಜಾತ್ರಾ ಮಹೋತ್ಸವ ಜ.14 ಮತ್ತು 15 ರಂದು ನಡೆಯಲಿದ್ದು,ಎರಡು ದಿನಗಳ ಜಾತ್ರಾ ಮಹೋತ್ಸವದ ನೇರ ಪ್ರಸಾರವನ್ನು ನುಡಿಸಿರಿ ವಾಹಿನಿಯಲ್ಲಿ ವೀಕ್ಷಿಸಬಹುದಾಗಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.
ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿಯ ಜಾತ್ರಾ ಮಹೋತ್ಸವ ಜ.14 ಮತ್ತು 15 ರಂದು ನಡೆಯಲಿದೆ. ನಾಡಿನ ಶಕ್ತಿ ದೇವತೆಯ ಜಾತ್ರಾ ಮಹೋತ್ಸವಕ್ಕೆ ದೇಶ ವಿದೇಶಗಳಿಂದಲೂ ಭಕ್ತರ ದಂಡೇ ಹರಿದು ಬರಲಿದೆ. ವಿಶೇಷ ಅಂದ್ರೆ ಈ ಬಾರಿ ಜಗತ್ಪ್ರಸಿದ್ದ ಸಿಗಂದೂರು ಚೌಡೇಶ್ವರಿ ದೇವಿಯ ಎರಡು ದಿನಗಳ ಜಾತ್ರಾ ಮಹೋತ್ಸವವನ್ನು ನಿಮ್ಮ ನುಡಿಸಿರಿ ವಾಹಿನಿ ನೇರ ಪ್ರಸಾರ ಮಾಡುತ್ತಿದೆ…
ನುಡಿ ಸಿರಿ ವಾಹಿನಿಯ ಗುಣಮಟ್ಟಕ್ಕೆ ಸಿಕ್ಕ ಮತ್ತೊಂದು ಹಿರಿಮೆ ಇದು. 2 ದಿನಗಳ ಕಾಲ ನಡೆಯುವ ಶ್ರೀ ದೇವಿಯ ಜಾತ್ರಾ ಮಹೋತ್ಸವದ ಕಂಪ್ಲೀಟ್ ಕವರೇಜ್ ಅನ್ನು ನಿಮ್ಮ ನುಡಿಸಿರಿ ವಾಹಿನಿಯಲ್ಲಿ ವೀಕ್ಷಿಸಬಹುದಾಗಿದೆ.
ಹಾಗೇ ನುಡಿಸಿರಿ ಯೂಟ್ಯೂಬ್ ಮತ್ತು ನುಡಿಸಿರಿ ಪೇಸ್‌ಬುಕ್ ಪೇಜ್‌ಗಳಲ್ಲೂ ಕೂಡ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಇನ್ನೊಂದು ವಿಶೇಷ ಅಂದ್ರೆ ಸಿಗಂದೂರಿನಲ್ಲಿ ಅಮ್ಮನ ಭಕ್ತರು ನುಡಿ ಸಿರಿ ವಾಹಿನಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸದಾವಕಾಶವನ್ನು ಕಲ್ಪಿಸಿಕೊಡಲಾಗಿದೆ…
ಇನ್ನು ಜಗತ್ಪ್ರಸಿದ್ದ ಜಾತ್ರಾ ಮಹೋತ್ಸವ ವಿಶೇಷ ಕ್ಷಣಗಳನ್ನು ನುಡಿಸಿರಿ ವಾಹಿನಿ ನಿಮ್ಮ ಮುಂದಿಡಲಿದ್ದು, ಸ್ಥಳ ಮಹಿಮೆಯ ಬಗ್ಗೆ ಸಿಗಂದೂರಿನಿಂದಲೇ ನಿಮಗೆ ಕ್ಷಣ ಕ್ಷಣದ ಮಾಹಿತಿ ನೀಡಲಿದೆ. ಹಾಥ್‌ವೇ ಕೇಬಲ್‌ನಲ್ಲಿ ನುಡಿ ಸಿರಿ ಚಾನಲ್ ನಂಬರ್ 199 ಪ್ರೆಸ್ ಮಾಡಿದ್ರೆ, ನೀವು ಸಿಗಂದೂರು ಜಾತ್ರಾ ಮಹೋತ್ಸವದ ಅದ್ದೂರಿ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ…