ಕಾನೂನು ಬಾಹಿರ ಮೀನುಗಾರಿಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ

ಭಟ್ಕಳ: ತಾಲೂಕಿನ ಸಮುದ್ರದ ವ್ಯಾಪ್ತಿಯ ೫ನಾಟಿಕಲ್ ಮೈಲು ದೂರದ ಒಳಗ ಮೀನುಗಾರಿಕೆ ನಡೆಸುತ್ತಿದ್ದ ಮಂಗಳೂರು ಮೂಲದ ಆಳಸಮುದ್ರ ಯಾಂತ್ರೀಕೃತ ಬೋಟ್‌ಗಳನ್ನು ಭಟ್ಕಳದ ಮೀನುಗಾರರು ಹಿಡಿದು ದಡಕ್ಕೆ ಬೋಟ್ ಮಾಲಕರ ವಿರುದ್ದ ಕ್ರಮ ಕೈಗೊಳ್ಳುವಂತೆ ಸಂಬಧಿಸಿದ ಇಲಾಖೆಗೆ ಆಗ್ರಹಿಸಿದ್ದಾರೆ.
ಸಮುದ್ರದಲ್ಲಿ ಕಾನೂನು ಬಾಹಿರವಾಗಿ ಆಳಸಮುದ್ರ ಯಾಂತ್ರೀಕೃತ ಬೋಟ್‌ಗಳು ಮೀನುಗಾರಿಕೆ ನಡೆಸುತ್ತಿವೆ. ಇದರಿಂದ ಸಣ್ಣ ಫಿಶಿಂಗ್ ಬೋಟ್‌ಗಳು ಅಪಾರ ನಷ್ಟವನ್ನು ಅನುಭವಿಸುತ್ತಿವೆ. ಈ ಕುರಿತು ಭಟ್ಕಳ, ತೆಂಗಿನಗುಡಿ, ಅಳಿವೆಕೋಡಿಯ ಮೀನುಗಾರರು ಇಲಾಖೆ, ಕರಾವಳಿ ಕಾವಲು ಪಡೆ, ಸಚಿವ, ಸಂಸದರಿಗೂ ಮನವಿ ನೀಡಿದ್ದರು. ಮನವಿ ನೀಡಿ ತಿಂಗಳುಗಳೆ ಕಳೆದರೂ ಯಾವುದೆ ಕ್ರಮವಾಗಿಲ್ಲ. ಇದರಿಂದ ಆಕ್ರೋಶಗೊಂಡ ತಾಲೂಕಿನ ಸುಮಾರು ೪೦ಮೀನುಗಾರರು ತಮ್ಮದೆ ಚಿಕ್ಕ ಫಿಶಿಂಗ್ ಬೋಟ್‌ಗಳನ್ನು ತಗೆದುಕೊಂಡು ಹೋಗಿ ಅವರನ್ನು ಸುತ್ತುವರೆದು ಅಳಿವೆಕೋಡಿ ಬಂದರಿಗೆ ಎಳೆದು ತಂದಿದ್ದಾರೆ.


ನೀರಿಗೆ ಬಿದ್ದ ಮೀನುಗಾರರ ಬದುಕು
ಕಳೆದ ಮೂರು ತಿಂಗಳಿನಿದ ಫಿಶಿಂಗ್ ಬೋಟುಗಳಿಗೆ ಸರಿಯಾದ ಮೀನುಗಾರಿಕೆ ಇಲ್ಲ. ಡಿಸೇಲ್ ಹಣ ಹೊಂದಿಸಲು ಹರಸಾಹಸ ಪಡಬೇಕು. ಮೀನುಗಾರರಿಗೆ ವೇತನ ನೀಡಲು ಮತ್ತೆ ಸಾಲ ಮಾಡಬೇಕಾದ ಸ್ಥಿತಿ. ಬೋಟ್‌ನ ಸಾಲ ಪಾವತಿ ಮಾಡಲು ಸಾದ್ಯವೆ ಆಗುತ್ತಿಲ್ಲ. ಅಂತಹುದರಲ್ಲಿ ೪೦ನಾಟಿಕಲ್ ಮೈಲು ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸಬೇಕಾದ ಬೋಟ್‌ಗಳು ನಮ್ಮ ಪ್ರದೇಶದಲ್ಲಿ ಬಂದು ಮೀನುಗಾರಿಕೆ ನಡೆಸಿ ಎಲ್ಲಾ ಮೀನುಗಳನ್ನು ದೋಚಿಕೊಂಡು ಹೋಗುತ್ತಿವೆ. ನಮ್ಮ ಬದುಕು ನೀರಿಗೆ ಬಿದ್ದಿದ್ದು ಸಂಕಷ್ಟ ಅನುಭವಿಸುತ್ತಿದ್ದೇವೆ. ಇದನ್ನು ತಡೆಯಲು ಯಾರು ಮುಂದಾಗುತ್ತಿಲ್ಲ ಎಂದು ಮೀನುಗಾರರು ಅಳಲುತೋಡಿಕೊಂಡಿದ್ದಾರೆ. ಅಲ್ಲದೆ ೫ ನಾಟಿಕಲ್ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ವಿರುದ್ದ ಕಠಿನಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮೀನುಗಾರರು ಈ ಹಿಂದೆ ನಮಗೆ ಡೀಪ್‌ಶಿ ಬೋಟ್‌ನವರ ವಿರುದ್ದ ದೂರು ನೀಡಿದ್ದರು. ಕರಾವಳಿ ಕವಲು ಪಡೆಯ ಅಧಿಕಾರಿಗಳೊಂದಿಗೆ ಈಮಕುರಿತು ಚರ್ಚೆ ನಡೆಸಿದ್ದೇವೆ. ಸ್ಥಳೀಯ ಮೀನುಗಾರರು ಮಂಗಳೂರು ಮೂಲದ ಬೋಟ್‌ಗಳನ್ನು ಎಳೆದು ದಡಕ್ಕೆ ತಂದಿದ್ದಾರೆ. ಈ ಕರಿತು ನಮಗೆ ಅವರಿಗೆ ಬೋಟಿನಲ್ಲಿದ್ದ ಮೀನಿನ ಹತ್ತುಪಟ್ಟು ಅಥವಾ ಅವರಿಗೆ ೫೦ಸಾವಿರ ದಂಡ ವಿಧಿಸಲು ಅಷ್ಟೆ ಅವಕಾಶವಿದೆ. ಆದರೆ ಇದಕ್ಕೆ ಮೀನುಗಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸಾಂಪ್ರದಾಯಿಕ ಮೀನುಗಾರಿಕೆ ದೋಣಿಗಳಿಗೆ ತೊಂದರೆ ಕೊಡುವ ಯಾಂತ್ರೀಕೃತ ಮೀನುಗಾರಿಕೆ ಬೋಟ್ ಮಾಲೀಕರಿಗೆ ಕಠಿಣ ಕ್ರಮದ ಸಂದೇಶ ರವಾನಿಸಬೇಕಾಗಿ ಕೋರುತ್ತೇವೆ. ಹಾಗೂ ಈ ಬೋಟ್‌ಗಳ ವಿರುದ್ಧ ಜರುಗಿಸಿದ ಕ್ರಮದ ಬಗ್ಗೆ ನಮಗೆ ಮಾಹಿತಿ ನೀಡಬೇಕು. ಮೀನುಗಾರರ ಮುಖಂಡರಾದ
ರಾಘವೇಂದ್ರ ಮಂಜುನಾಥ ಖಾರ್ವಿ
ಆಗ್ರಹಿಸಿದ್ದಾರೆ