ಪಣಸೋಲಿಯಲ್ಲಿ ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ದರ್ಶನ ನೀಡಿದ ಹುಲಿರಾಯ

ಜೋಯಿಡಾ : ಸಮೃದ್ಧ ಕಾಡು ಹಾಗೂ ಹೇರಳ ವನ್ಯಸಂಪತ್ತಿನ ಮೂಲಕ ಗಮನ ಸೆಳೆದಿರುವ ತಾಲೂಕು ಜೋಯಿಡಾ. ಆ ಕಾರಣಕ್ಕಾಗಿಯೇ ತಾಲೂಕಿನಲ್ಲಿ ಪ್ರವಾಸೋದ್ಯಮ ಚಟುವಟಿಕೆ ಶರವೇಗದಲ್ಲಿ ಬೆಳೆಯುತ್ತಿದೆ.

ಪ್ರವಾಸಿಗರಿಗೆ ಪರಿಸರ ಹಾಗೂ ವನ್ಯ ಸಂರಕ್ಷಣೆಯ ಕುರಿತಂತೆ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಮತ್ತು ಇವುಗಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುವಂತಾಗಲು ವನ್ಯಜೀವಿ ಇಲಾಖೆಯ ಆಶ್ರಯದಲ್ಲಿ ಜೋಯಿಡಾ ತಾಲೂಕಿನ ಪಣಸೋಲಿಯಿಂದ ಜಂಗಲ್ ಸಫಾರಿಯನ್ನು ನಡೆಸಲಾಗುತ್ತದೆ .

ಜಂಗಲ್ ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಹುಲಿಯೊಂದು ದರ್ಶನವನ್ನು ನೀಡಿದೆ. ಹುಲಿಯನ್ನು ನೋಡಿದೊಡನೆ ಪ್ರವಾಸಿಗರು ಆಶ್ಚರ್ಯ ಚಕಿತರಾಗಿ ತಮ್ಮ ಮೊಬೈಲ್ ಕ್ಯಾಮೇರಾದಲ್ಲಿ ವಿಡಿಯೋ, ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಇದೀಗ ಹುಲಿರಾಯ ದರ್ಶನ ನೀಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ.