ಕುಳಗಿ ರಸ್ತೆಯ ಶ್ರೀ.ಅಯ್ಯಪ್ಪ ಸ್ವಾಮಿ‌ ಮಂದಿರದಲ್ಲಿ ಇರುಮುಡಿ ಕಟ್ಟು ಕಾರ್ಯಕ್ರಮ

ದಾಂಡೇಲಿ : ನಗರದ ಕುಳಗಿ ರಸ್ತೆಯ ಶ್ರೀ.ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಶ್ರೀ ಅಯ್ಯಪ್ಪ ಮಾಲಾಧಾರಿಗಳ ಇರುಮುಡಿ ಕಟ್ಟು ಕಾರ್ಯಕ್ರಮವು ಬುಧವಾರ ಶ್ರದ್ಧಾಭಕ್ತಿಯಿಂದ ಜರುಗಿತು.

ಶ್ರೀ.ಅಯ್ಯಪ್ಪ ಸೇವಾ ಸಮಿತಿ ಆಶ್ರಯದಡಿ ಗುರುಸ್ವಾಮಿ ಮೋಹನ್ ಸನದಿಯವರ ನೇತೃತ್ವದಲ್ಲಿ ಇರುಮುಡಿ ಕಟ್ಟು ಪೂಜಾ ಕಾರ್ಯಕ್ರಮವು ಜರುಗಿತು.

ಈ ಸಂದರ್ಭದಲ್ಲಿ ಶ್ರೀ.ಅಯ್ಯಪ್ಪ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಅಯ್ಯಪ್ಪ ಮಾಲಾಧಾರಿಗಳು, ಅಯ್ಯಪ್ಪ ಮಾಲಾಧಾರಿಗಳ ಕುಟುಂಬಸ್ಥರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ಕುಳಗಿ ರಸ್ತೆಯ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರವು ದಾಂಡೇಲಿ ಹಾಗೂ ದಾಂಡೇಲಿ ಸುತ್ತಮುತ್ತಲ ಅಯ್ಯಪ್ಪ ಮಾಲಾಧಾರಿಗಳಿಗೆ ಮತ್ತು ಅಯ್ಯಪ್ಪ ಭಕ್ತರಿಗೆ ಪ್ರಧಾನ ಭಕ್ತಿ ಕೇಂದ್ರವಾಗಿ‌ ಗಮನ ಸೆಳೆದಿದೆ.