ಅಬ್ಬರದ ಮಳೆಗೆ ಕುಸಿದು ಬಿದ್ದ ಶಾಲಾ ಕಟ್ಟಡ.!

ಭಟ್ಕಳ: ಜಿಲ್ಲೆಯಲ್ಲಿ ಅಬ್ಬರದ ಮಳೆ ಮುಂದುವರಿದಿದೆ. ಮಳೆಯಿಂದ ಭಟ್ಕಳ ತಾಲೂಕಿನ ಮುಂಡಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕುಸಿತವಾಗಿದೆ. ರಾತ್ರಿ ವೇಳೆ ಶಾಲೆಯ ಒಂದು ಪಾರ್ಶ್ವದ ಕುಸಿದು ಕೊಠಡಿ ಕುಸಿದು ಬಿದ್ದಿದೆ. ಹಳೆಯ ಕಟ್ಟಡವಾಗಿದ್ದರಿಂದ ಮಳೆಗೆ ಗೋಡೆ ನೆನೆದು ಕುಸಿದು ಧರಾಶಾಹಿಯಾಗಿದೆ.