ಕಾಮನ್‌ವೆಲ್ತ್ ಗೇಮ್ಸ್: 2 ಚಿನ್ನ, 1 ಕಂಚು ಗೆದ್ದ ಕುಸ್ತಿಪಟುಗಳು

ನವದೆಹಲಿ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ರವಿ ದಹಿಯಾ ಹಾಗೂ ಕಂಚಿನ ಪದಕ ಗೆದ್ದ ಪೂಜಾ ಗೆಹ್ಲೋಟ್‌ರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಟ್ವೀಟ್ ಮಾಡಿರುವ ಅವರು ವಿನೇಶ್ ಫೋಗಟ್ ಗೆಲುವು ಬಹಳ ವಿಶೇಷವಾಗಿದೆ. ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಸತತ ಮೂರನೇ ಚಿನ್ನ ಗೆದ್ದ ಭಾರತದ ಪ್ರತಿಷ್ಠಿತ ಕ್ರೀಡಾಪಟುಗಳಲ್ಲಿ ಒಬ್ಬರು ಎಂದು ಶ್ಲಾಘಿಸಿದ್ದಾರೆ.

ಇನ್ನೂ ರವಿ ದಹಿಯಾ ಚಾಂಪಿಯನ್‌ನಂತೆ ಆಡಿ ಚಿನ್ನದ ಪದಕ ಗೆದ್ದಿದ್ದು, ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆ. ಸಮರ್ಪಣಾ ಮನೋಭಾವ ಇದ್ದರೆ ಯಾವುದೇ ಕನಸು ದೊಡ್ಡದಲ್ಲ ಎಂಬುದನ್ನು ರವಿ ಗೆಲುವು ಸಾಬೀತುಪಡಿಸಿದೆ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.

ಅದಲ್ಲದೇ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಪೂಜಾ ಗೆಹ್ಲೋಟ್ ಅಭಿನಂದಿಸಿದ ಪ್ರಧಾನಿ, ಪೂಜಾ ಗೆಹ್ಲೋಟ್ ಅವರು ಧೈರ್ಯದಿಂದ ಹೋರಾಡಿದರು ಮತ್ತು ತಮ್ಮ ಆಟದ ಮೂಲಕ ಅಸಾಧಾರಣ ತಾಂತ್ರಿಕ ಶ್ರೇಷ್ಠತೆಯನ್ನು ಪ್ರದರ್ಶಿಸಿದರು. ಅವರ ಮುಂಬರುವ ಪ್ರಯತ್ನಗಳಿಗಾಗಿ ಅವರಿಗೆ ಆಲ್ ದಿ ಬೆಸ್ಟ್ ಎಂದು ಮೋದಿ ಶುಭ ಹಾರೈಸಿದ್ದಾರೆ.