ಅತಿ ಹೆಚ್ಚು ಲಗಾಣಿ ಆಕರಣೆಯ ವಿರುದ್ಧ ಹಳಿಯಾಳದಲ್ಲಿ ಕಬ್ಬು ಬೆಳೆಗಾರರಿಂದ ದಿಢೀರ್ ಪ್ರತಿಭಟನೆ

ಹಳಿಯಾಳ : ಕಬ್ಬು ಬೆಳೆಗಾರರರಿಂದ ಕಬ್ಬು ಕಟಾವುದಾರರು ಅತಿ ಹೆಚ್ಚು ಲಗಾಣಿ ಆಕರಿಸುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿ ಕಬ್ಬು ಬೆಳೆಗಾರರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ‌ ಘಟನೆ ನಡೆದಿದೆ.

ಪಟ್ಟಣದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ದಿಡೀರ್ ಪ್ರತಿಭಟನೆ ಹಮ್ಮಿಕೊಂಡ ಕಬ್ಬು ಬೆಳೆಗಾರರ ಸಂಘಟನೆ ಲಗಾಣಿ ದರ ಇಳಿಸಬೇಕು ಹಾಗೂ ತಾಲೂಕಾಡಳಿತ ಮಧ್ಯೆ ಪ್ರವೇಶಿಸಿ ರೈತರ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು

ಅಲ್ಲದೆ ಪ್ಯಾರಿ ಶುಗರ್ಸ್ ಕಂಪನಿಯವರು ವಾಟ್ಸಾಪ್ ಗಳಲ್ಲಿ ಹಂಚಿಕೊಂಡಿದ್ದ ಕಬ್ಬನ್ನು ಕಟಾವು ಮಾಡಿ ಬೇರೆ ಕಂಪನಿಗಳಿಗೆ ಸಾಗಿಸಲು ನಿಷೇಧವಿದೆ ಎನ್ನುವ ಆಯುಕ್ತರ ಆದೇಶ ಪ್ರತಿಯನ್ನು ಹಂಚಿಕೊಂಡಿರುವುದೇ ಸಮಸ್ಯೆಯ ಕೇಂದ್ರ ಬಿಂದುವಾಗಿ ದಿಢೀರ್ ಪ್ರತಿಭಟನೆಗೆ ಕಾರಣವಾಯಿತು.