ಚೆನ್ನೈ ಜನವರಿ 02: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ತಮಿಳುನಾಡಿನ ತಿರುಚ್ಚಿರಾಪಳ್ಳಿಯಲ್ಲಿ ವಿಮಾನಯಾನ, ರೈಲು, ರಸ್ತೆ, ತೈಲ ಮತ್ತು ಅನಿಲ, ಹಡಗು ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಿಗೆ ಸಂಬಂಧಿಸಿದ ₹20,000 ಕೋಟಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಇದೇ ವೇಳೆ ತಿರುಚ್ಚಿರಾಪಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ಉದ್ಘಾಟಿಸಿದ್ದಾರೆ…
ತಿರುಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಬಿಕ್ಕಟ್ಟಿನ ಸಂದರ್ಭದಲ್ಲಿ ತಮಿಳುನಾಡು ಜನರೊಂದಿಗೆ ಕೇಂದ್ರ ಸರ್ಕಾರ ನಿಂತಿದೆ. ಮತ್ತು ತಮಿಳುನಾಡಿನ ಜನರಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತಿದೆ ಎಂದು ಹೇಳಿದ್ರು. ಹಾಗೇ ಇತ್ತಿಚಿಗೆ ನಿಧನರಾದ ನಟ, ರಾಜಕಾರಣಿ ವಿಜಯಕಾಂತ್ ಮತ್ತು ಎಂಎಸ್ ಸ್ವಾಮಿನಾಥನ್ ಅವರ ಕೊಡುಗೆಗಳನ್ನು ಸ್ಮರಿಸಿದ್ರು..
ಸ್ಟ್ಯಾಲಿನ್ ಭಾಷಣಕ್ಕೆ ಬಂದಾಗ ಮೋದಿಗೆ ಜೈಕಾರ
ಇದಕ್ಕೂ ಮುನ್ನ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಭಾಷಣ ಮಾಡಲು ಬಂದಾಗ, ನೆರೆದಿದ್ದ ಸಭಿಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ಘೋಷಣೆಗಳನ್ನು ಕೂಗಿದ್ದಾರೆ. ಯಾವ ಮಟ್ಟಿಗೆ ಅಂದ್ರೆ, ಮೋದಿ ಮೋದಿ ಅನ್ನೋ ಘೋಷಣೆ ಒಂದು ಕ್ಷಣ ಸಿಎಂ ಸ್ಟ್ಯಾಲಿನ್ ಅವರನ್ನು ವಿಚಲಿತರನ್ನಾಗಿಸಿತು. ಇದನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿ ಸುಮ್ಮನಿರಿ ಅಂತ ಕೈ ಸನ್ನೆ ಮಾಡಿದ್ರು. ಆದ್ರೆ ಪ್ರಧಾನಿ ಕೈ ಸನ್ನೆಯನ್ನು ಲೆಕ್ಕಿಸದ ಜನರು, ಮತ್ತಷ್ಟು ಜೋರಾಗಿ ಮೋದಿ ಮೋದಿ ಎಂದು ಜೈಕಾರ ಹಾಕಿದ್ದಾರೆ…
ಸದ್ಯ ತಮಿಳುನಾಡಿನಲ್ಲಿ ಅಣ್ಣಾಮಲೈ ಬಿಜೆಪಿ ಪರ ಹೊಸ ಅಲೆಯನ್ನೇ ಎಬ್ಬಿಸಿದ್ದಾರೆ. ಹೀಗಾಗಿ ತಮಿಳುನಾಡು ರಾಜಕಾರಣದಲ್ಲಿ ಹೊಸ ಗಾಳಿ ಬೀಸಲು ಶುರುವಾಗಿದೆ. ಈ ಮಧ್ಯೆ ಲೋಕಸಭೆ ಚುನಾವಣೆ ಹತ್ತಿರದಲ್ಲೇ ಇದ್ದು, ಈ ಬೆಳವಣಿಗೆ ಮೋದಿ ಜನಪ್ರಿಯತೆ ತಮಿಳುನಾಡಿನಲ್ಲೂ ಹೆಚ್ಚಿದೆ ಅನ್ನೋ ಸಂದೇಶ ನೀಡಿದೆ..