ದುಬೈನಲ್ಲಿ ನಡೆದ ಐಪಿಎಲ್ ಸೀಸನ್-17 ಮಿನಿ ಹರಾಜಿನಲ್ಲಿ ಪ್ಯಾಟ್ ಕಮಿನ್ಸ್ ಬರೋಬ್ಬರಿ 20.50 ಕೋಟಿ ರೂ.ಗೆ ಬಿಕರಿಯಾಗಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ದುಬಾರಿ ಮೊತ್ತವನ್ನು ಪಾವತಿಸಿ ಆಸ್ಟ್ರೇಲಿಯಾ ತಂಡದ ನಾಯಕನನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿಶೇಷ ಎಂದರೆ ಈ 20.50 ಕೋಟಿ ರೂ.ನೊಂದಿಗೆ ಐಪಿಎಲ್ ಇತಿಹಾಸದಲ್ಲೇ ಹರಾಜಿನ ಮೂಲಕ 50 ಕೋಟಿ ರೂ. ಪಡೆದ ಮೊದಲ ಆಟಗಾರ ಎಂಬ ಹಿರಿಮೆಗೆ ಪ್ಯಾಟ್ ಕಮಿನ್ಸ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಇಂತಹದೊಂದು ವಿಶೇಷ ದಾಖಲೆ ಯುವರಾಜ್ ಸಿಂಗ್ ಹೆಸರಿನಲ್ಲಿತ್ತು.
ಆರು ಬಾರಿ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಯುವರಾಜ್ ಸಿಂಗ್ ಬಿಡ್ಡಿಂಗ್ ಮೂಲಕ ಪಡೆದ ಒಟ್ಟು ಮೊತ್ತ 48.1 ಕೋಟಿ ರೂ. ಇದೀಗ 20.50 ಕೋಟಿ ರೂ.ನೊಂದಿಗೆ ಪ್ಯಾಟ್ ಕಮಿನ್ಸ್ ಯುವಿಯನ್ನು ಹಿಂದಿಕ್ಕಿರುವುದು ವಿಶೇಷ.
ಪ್ಯಾಟ್ ಕಮಿನ್ಸ್ ಕೂಡ 6 ಬಾರಿ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಪಡೆದಿರುವ ಒಟ್ಟು ಹರಾಜು ಮೊತ್ತ 54.15 ಕೋಟಿ ರೂ. ಅಂದರೆ ಕಮಿನ್ಸ್ ಖರೀದಿಗಾಗಿ ಐಪಿಎಲ್ ಫ್ರಾಂಚೈಸಿಗಳು ಹೆಚ್ಚಿನ ಮೊತ್ತ ಪಾವತಿಸಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವುದು ಗ್ಲೆನ್ ಮ್ಯಾಕ್ಸ್ವೆಲ್. 4 ಬಾರಿ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಮ್ಯಾಕ್ಸ್ವೆಲ್ಗೆ ಸಿಕ್ಕಿರುವ ಒಟ್ಟು ಹರಾಜು ಮೊತ್ತ 45.3 ಕೋಟಿ ರೂ.
ಹಾಗೆಯೇ ಪ್ರಸ್ತುತ ಆರ್ಸಿಬಿ ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 5 ಬಾರಿ ಆಕ್ಷನ್ನಲ್ಲಿ ಕಾಣಿಸಿಕೊಂಡಿದ್ದ ಡಿಕೆ ಒಟ್ಟು 44.35 ಕೋಟಿ ರೂ. ಮೊತ್ತಕ್ಕೆ ಹರಾಜಾಗಿದ್ದಾರೆ.
ಇನ್ನು 4 ಬಾರಿ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಇಂಗ್ಲೆಂಡ್ನ ಬೆನ್ ಸ್ಟೋಕ್ಸ್ ಒಟ್ಟು 43.25 ಕೋಟಿ ರೂ. ಪಡೆಯುವ ಮೂಲಕ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.